ಹಿರ್ಗಾನದಲ್ಲಿ ಸೂಪರ್ ಸಿಕ್ಸ್ ಕ್ರಿಕೆಟ್ : ಬೈಂದೂರು ಮಡಿಲಿಗೆ "SMG ಟ್ರೋಫಿ 2023"
Thumbnail
ಕಾರ್ಕಳ : ಭಾರತೀಯ ಕಥೋಲಿಕ್ ಯುವ ಸಂಚಲನ(ICYM) ಹಿರ್ಗಾನ ಇದರ ಮುಂದಾಳತ್ವದಲ್ಲಿ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಕಥೋಲಿಕ ಕ್ರೈಸ್ತ ಸಮಾಜ ಬಾಂಧವರಿಗಾಗಿ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಕೂಟ "SMG ಟ್ರೋಫಿ 2023" ಹಿರ್ಗಾನ ಚರ್ಚ್ ಮೈದಾನದಲ್ಲಿ ನವೆಂಬರ್ 19 ರಂದು ಅದ್ದೂರಿಯಾಗಿ ನೆರವೇರಿತು. ಉಡುಪಿ ಧರ್ಮ ಪ್ರಾಂತ್ಯದ ವಿವಿಧ ಚರ್ಚುಗಳಿಂದ 32 ತಂಡಗಳು ಪ್ರಶಸ್ತಿಗಾಗಿ ಸ್ಪರ್ಧಿಸಿದ್ದವು. ಹಿರ್ಗಾನ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಹಾಗೂ ಸಂತ ಮರಿಯ ಗೊರೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರ್ಗಾನ ಧರ್ಮ ಕೇಂದ್ರದ ಧರ್ಮ ಗುರುಗಳಾದ ವಂ. ಸ್ವಾಮಿ ಜೋನ್ ವಾಲ್ಟರ್ ಮೆಂಡೋಂನ್ಸಾ ವಹಿಸಿದ್ದರು. ವೇದಿಕೆಯಲ್ಲಿ ಎಫ್.ಎಂ.ಎಂ ಕಾನ್ವೆಂಟಿನ ಮುಖ್ಯಸ್ಥೆ ಸಿ. ಬ್ರಿಜಿತ್ ಮಾಡ್ತಾ, ಪಾಲನಾ ಮಂಡಳಿಯ ಸದಸ್ಯರು, ಐಸಿವೈಎಂ ಕಾರ್ಕಳ ವಲಯದ ಸದಸ್ಯರು, ಮತ್ತಿತರರು ಹಾಜರಿದ್ದರು. ಫೈನಲ್ ಪಂದ್ಯದಲ್ಲಿ ಬೈಂದೂರು ದೇವಾಲಯದ ತಂಡ ಪ್ರಥಮ ಸ್ಥಾನ ಗಳಿಸಿದರೆ, ಶಂಕರಪುರ ದೇವಾಲಯದ ತಂಡವು ದ್ವಿತೀಯ ಸ್ಥಾನ ಪಡೆಯಿತು. ಸಮಾರೋಪ ಸಮಾರಂಭದಲ್ಲಿ ಉಡುಪಿ ಧರ್ಮ ಪ್ರಾಂತ್ಯದ ಯುವ ನಿರ್ದೇಶಕರಾದ ವಂ. ಸ್ವಾಮಿ ಸ್ಟೀವನ್ ಫೆರ್ನಾಂಡಿಸ್, ಕಾರ್ಕಳ ವಲಯದ ಯುವ ನಿರ್ದೇಶಕರಾದ ವಂ. ಲ್ಯಾರಿ ಪಿಂಟೊ, ಹಿರ್ಗಾನ ಧರ್ಮ ಕೇಂದ್ರದ ಧರ್ಮ ಗುರುಗಳಾದ ವಂ. ಸ್ವಾಮಿ ಜೋನ್ ವಾಲ್ಟರ್ ಮೆಂಡೋಂನ್ಸಾ, ಎಫ್ಎಂಎಂ ಕಾನ್ವೆಂಟಿನಾ ಮುಖ್ಯಸ್ಥರಾದ ಸಿ. ಬ್ರಿಜಿತ್ ಮಾಡ್ತಾ, ಐಸಿವೈಯಂ ಕೇಂದ್ರೀಯ ಅಧ್ಯಕ್ಷೆ ಕು. ಅಶ್ಲಿ ಡಿಸೋಜಾ, ಹಿರ್ಗಾನ ಘಟಕದ ಸಲಹೆಗಾರರಾದ ಝಿನ ಡಿಸಿಲ್ವಾ, ಅಧ್ಯಕ್ಷ ಗ್ರೇಶನ್ ಡಿಸೋಜಾ ಹಾಗೂ ಕಾರ್ಯದರ್ಶಿ ಅಶುವಲ್ ಡಿಸೋಜಾ, ಮತ್ತಿತರು ಉಪಸ್ಥಿತರಿದ್ದರು. ಎಲ್ಸನ್ ಹಿರ್ಗಾನ್ ಕಾರ್ಯಕ್ರಮ ನಿರೂಪಿಸಿದರು.
Additional image Additional image
21 Nov 2023, 02:33 PM
Category: Kaup
Tags: