ಹೆಜಮಾಡಿ : ಫಾತಿಮಾ ರಲಿಯಾ ಅವರ 'ಕಡಲು ನೋಡಲು ಹೋದವಳು' ಕೃತಿ ಪಿ. ಲಂಕೇಶ್ ಪ್ರಶಸ್ತಿಗೆ ಆಯ್ಕೆ
ಹೆಜಮಾಡಿ : ಗ್ರಾಮದ ಫಾತಿಮಾ ರಲಿಯಾ ಅವರ
'ಕಡಲು ನೋಡಲು ಹೋದವಳು' ಕೃತಿ ಶಿವಮೊಗ್ಗದ ಕರ್ನಾಟಕ ಸಂಘ ಪ್ರತೀ ವರ್ಷ ನೀಡುವ ಪಿ. ಲಂಕೇಶ್ ಪ್ರಶಸ್ತಿಗೆ ಆಯ್ಕೆಯಾಗಿದೆ.
ನವೆಂಬರ್ 26ರಂದು ಶಿವಮೊಗ್ಗದ ಹಸೂಡಿ ವೆಂಕಟ ಶಾಸ್ತ್ರಿಗಳ ಸಾಹಿತ್ಯ ಭವನದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಹತ್ತು ಸಾವಿರ ರೂ. ನಗದು ಹಾಗೂ ಸ್ಮರಣಿಕೆಯನ್ನು ಈ ಪ್ರಶಸ್ತಿ ಒಳಗೊಂಡಿದೆ. ಫಾತಿಮಾ ರಲಿಯಾರವರ ಪ್ರಥಮ ಕೃತಿಯಾಗಿದೆ. ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ.
