ಉಡುಪಿ ಜಿಲ್ಲಾಧಿಕಾರಿ ಭೇಟಿಯಾಗಿ ಬರ, ಬೆಲೆ ಸಮೀಕ್ಷೆ ವರದಿ ಸಲ್ಲಿಸಿದ ಜಿಲ್ಲೆಯ ಜೆಡಿಎಸ್ ತಂಡ
Thumbnail
ಉಡುಪಿ : ಮಾಜಿ ಪ್ರಧಾನಿ ದೇವೇಗೌಡರ ಮತ್ತು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠರ ಸೂಚನೆಯಂತೆ ಉಡುಪಿ ಜೆಡಿಎಸ್ ನ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಬಾಲಾಜಿಯವರ ನೇತೃತ್ವದ ತಂಡವು ಉಡುಪಿ ಜಿಲ್ಲೆಯಲ್ಲಿ ಬರ ಹಾಗೂ ಬೆಲೆ ಸಮೀಕ್ಷೆಯನ್ನು ನಡೆಸಿ ರೈತರಿಗಾಗಿರುವ ಸಮಸ್ಯೆಯನ್ನು ಪರಿಶೀಲನೆ ನಡೆಸಿ ಬುಧವಾರ ಉಡುಪಿ ಜಿಲ್ಲಾಧಿಕಾರಿಯಾದ ಡಾ. ಕೆ ವಿದ್ಯಾ ಕುಮಾರಿಯವರಿಗೆ ಪಕ್ಷದ ವತಿಯಿಂದ ವರದಿಯನ್ನು ಸಲ್ಲಿಸಿದರು. ಈ ಸಂದರ್ಭ ಕಾರ್ಯಧ್ಯಕ್ಷ ವಾಸುದೇವ ರಾವ್, ಪ್ರಧಾನ ಕಾರ್ಯದರ್ಶಿ ಜಯರಾಮ್ ಆಚಾರ್ಯ, ಶ್ರೀಕಾಂತ್ ಪೂಜಾರಿ ಹೆಬ್ರಿ, ರಮೇಶ್ ಕುಂದಾಪುರ, ರಝಕ್ ಉಚ್ಚಿಲ, ವೆಂಕಟೇಶ್, ಅಶ್ರಫ್, ಅಮಿರ್ ಶಿರ್ವ, ಉದಯ ಶೆಟ್ಟಿ, ರವಿರಾಜ್ ಸಾಲ್ಯಾನ್, ಬಿ.ಕೆ ಹೆಜಮಾಡಿ ಮತ್ತು ರಶೀದ್ ಮತ್ತಿತರರು ಉಪಸ್ಥಿತರಿದ್ದರು.
22 Nov 2023, 06:58 PM
Category: Kaup
Tags: