ಉಡುಪಿಯ ಖ್ಯಾತ ಛಾಯಾಗ್ರಾಹಕ ಪ್ರಸಾದ್ ಜತ್ತನ್ ರಿಗೆ ಅಂತಾರಾಷ್ಟ್ರೀಯ ಗೌರವ
Thumbnail
ಉಡುಪಿ : ಕಲಾತ್ಮಕ ಛಾಯಾಗ್ರಹಣ ಕ್ಷೇತ್ರದಲ್ಲಿ 85ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಅಂಗ ಸಂಸ್ಥೆಯನ್ನು ಹೊಂದಿರುವ UNESCO ಮಾನ್ಯತೆ ಪಡೆದ ವಿಶ್ವದ ಏಕೈಕ ಸಂಸ್ಥೆಯಾದ FIAP ವತಿಯಿಂದ ಉಡುಪಿಯ ಖ್ಯಾತ ಛಾಯಾಗ್ರಾಹಕ ಪ್ರಸಾದ್ ಜತ್ತನ್ ಅವರಿಗೆ ಅಂತಾರಾಷ್ಟ್ರೀಯ EFIAP Distinction ಗೌರವ ಲಭಿಸಿದೆ. ಈ ಗೌರವ ಲಭಿಸಲು 20ಕ್ಕೂ ಅಧಿಕ ದೇಶಗಳಲ್ಲಿ ಚಿತ್ರಗಳು ಪ್ರದರ್ಶನಗೊಂಡಿರಬೇಕು. ಕನಿಷ್ಠ ಹೊರಗಿನ 2 ದೇಶಗಳಲ್ಲಾದರೂ ಪ್ರಶಸ್ತಿ ಬಂದಿರಬೇಕು ಮತ್ತು ಕನಿಷ್ಠ 250 ಚಿತ್ರಗಳು ಆಯ್ಕೆಗೊಂಡಿರಬೇಕು. ಇವರ ಛಾಯಾಚಿತ್ರಗಳು ಅಮೇರಿಕ,ಇಂಗ್ಲೆಂಡ್, ಸಿಂಗಾಪುರ್, ಸ್ವಿಟ್ಜರ್ಲ್ಯಾಂಡ್, ಪೋಲೆಂಡ್ ಮತ್ತು ಗ್ರೀಸ್ ಮುಂತಾದ 21 ದೇಶಗಳಲ್ಲಿ ಪ್ರದರ್ಶನ ಕಂಡಿವೆ, ಇವರು ಉಡುಪಿಯ ಖ್ಯಾತ ಛಾಯಾಗ್ರಾಹಕ ಗುರುದತ್ ಕಾಮತ್ ಅವರ ಶಿಷ್ಯ.
Additional image Additional image
22 Nov 2023, 07:48 PM
Category: Kaup
Tags: