ಪಡುಬಿದ್ರಿ : ಎ ಎಸ್ ಐ ದಿವಾಕರ ಜೆ. ಸುವರ್ಣರಿಗೆ ಬೀಳ್ಕೊಡುಗೆ
Thumbnail
ಪಡುಬಿದ್ರಿ : 31 ವರ್ಷಗಳ ಕಾಲ ಪೋಲಿಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆಗೈದು ವಯೋ ನಿವೃತ್ತಿ ಹೊಂದಿದ ಎ ಎಸ್ ಐ ದಿವಾಕರ ಜೆ. ಸುವರ್ಣರ ಬೀಳ್ಕೊಡುಗೆ ಸಮಾರಂಭ ಗುರುವಾರ ಪಡುಬಿದ್ರಿ ಮಾರ್ಕೆಟ್ ರಸ್ತೆಯ ಸಾಯಿ ಆರ್ಕೇಡ್ ನಲ್ಲಿ ಜರಗಿತು. ಈ ಸಂದರ್ಭ ಪಡುಬಿದ್ರಿ ಠಾಣೆಯ ಎ ಎಸ್ ಐ ಸುರೇಶ್ ಭಟ್, ಹೆಡ್ ಕಾನ್ ಸ್ಟೇಬಲ್ ಚಂದ್ರ ಬಿಲ್ಲವ, ಮಣಿಪಾಲ ಠಾಣೆಯ ಎ ಎಸ್ ಐ ನಾಗೇಶ್, ಸಿಬ್ಬಂದಿಗಳಾದ ಶಶಿಕುಮಾರ್, ಸುಕೇಶ್, ಶ್ರೀಧರ್, ಸಾಮಾಜಿಕ ಕಾರ್ಯಕರ್ತರಾದ ಲೋಕೇಶ್ ಕಂಚಿನಡ್ಕ, ಶೇಖರ ಹೆಜಮಾಡಿ, ಲೋಕೇಶ್ ಹೆಜಮಾಡಿ, ಪತ್ರಕರ್ತ ರಾಮಚಂದ್ರ ಆಚಾರ್ಯ ನಿವೃತ್ತರ ಬಗ್ಗೆ ತಮ್ಮ ‌ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸನ್ಮಾನ : ಪಡುಬಿದ್ರಿ ಠಾಣಾ ಸಿಬ್ಬಂದಿಗಳು, ಹೋಮ್ ಗಾಡ್ಸ್೯, ಹೆಜಮಾಡಿ ಬಿಲ್ಲವ ಸಂಘ, ಅಂಬೇಡ್ಕರ್ ಯುವಸೇನೆ ವತಿಯಿಂದ ದಿವಾಕರ ಜೆ. ಸುವರ್ಣರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ದಿವಾಕರ ಜೆ. ಸುವರ್ಣ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರ ಸಹಕಾರದಿಂದ ಪೋಲಿಸ್ ಇಲಾಖೆಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು. ಮಾಡುವ ಕೆಲಸದಲ್ಲಿ ನಿಷ್ಠೆಯಿದ್ದಾಗ ಮಾತ್ರ ‌ಉತ್ತಮ ಫಲ‌ ದೊರಕುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಮಾತನಾಡಿ ದಿವಾಕರ ಜೆ. ಸುವರ್ಣರು ಪೋಲಿಸ್ ಇಲಾಖೆಯಲ್ಲಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಅವರು ವಯೋ ನಿವೃತ್ತಿ ಹೊಂದಿರಬಹುದು. ಆದರೆ ಅವರ ಸಲಹೆ ಸಹಕಾರ ಮುಂದೆಯೂ ಇರಲಿ‌. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು. ಈ‌‌ ಸಂದರ್ಭ ವೇದಿಕೆಯಲ್ಲಿ ಎ ಎಸ್ ಐ ದಿವಾಕರ ಜೆ. ಸುವರ್ಣರ ಪತ್ನಿ ಹರಿಣಾಕ್ಷಿ, ಪಡುಬಿದ್ರಿ ಠಾಣೆಯ ಅಪರಾಧ ವಿಭಾಗದ ಪಿ ಎಸ್ ಐ ಸುದರ್ಶನ ದೊಡ್ಡಮಣಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಠಾಣಾ ಸಿಬ್ಬಂದಿ ವೆಂಕಟೇಶ ಸ್ವಾಗತಿಸಿದರು. ಸಿಬ್ಬಂದಿ ಯೋಗೀಶ್ ನಿರೂಪಿಸಿ, ವಂದಿಸಿದರು.
Additional image
01 Dec 2023, 07:45 AM
Category: Kaup
Tags: