ಶಂಕರಪುರ :ಸಂತ ಆಶ್ರಯಧಾಮ ನಿರ್ಮಾಣಕ್ಕೆ ಭೂಮಿ ಪೂಜೆ, ಭಗವಧ್ವಜ ಸ್ಥಾಪನೆ
ಶಂಕರಪುರ : ಶಿರ್ವ ಮಟ್ಟಾರಿನ ಪಾಂಜಗುಡ್ಡೆಯಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಯೋಜನೆಯಾದ ಸಂತ ಆಶ್ರಯಧಾಮ
ನಿರ್ಮಾಣದ ಭೂಮಿಯಲ್ಲಿ ರವಿವಾರ 54 ಸಾಧು-ಸಂತರಿಂದ ದೀಪ ಬೆಳಗಿಸಿ, ಭಗವಧ್ವಜ ಸ್ಥಾಪಿಸಿ ಪ್ರಾರ್ಥನೆ ಸಲ್ಲಿಸಿ ಚಾಲನೆಯನ್ನು ನೀಡಲಾಯಿತು.
ಶಂಕರಪುರ ದ್ವಾರಕಾಮಾಯಿ ಮಠ ಶ್ರೀಸಾಯಿ ಮುಖ್ಯಪ್ರಾಣ ದೇವಸ್ಥಾನದ ಧರ್ಮದರ್ಶಿ ಶ್ರೀ ಸಾಯಿ ಈಶ್ವರ್ ಗುರೂಜಿ ಮಾತನಾಡಿ, ಭಾರ್ಗವ ಮುನಿಗಳು ಸಾಧು ಸಂತರು ತಪಸ್ಸನ್ನುಗೈದಂತಹ ಪುಣ್ಯಕ್ಷೇತ್ರ ಇದಾಗಿದೆ. ಸಾಧು ಸಂತರು ಅನಾಥರಾಗಬಾರದು ಎಂಬ ಯೋಚನೆಯೊಂದಿಗೆ ಸಂತ ಆಶ್ರಯಧಾಮ ನಿರ್ಮಾಣದ ಯೋಜನೆಯೊಂದಿಗೆ ಭೂಮಿಯು ಅಭಿವೃದ್ಧಿಗೊಳ್ಳಲಿದ್ದು, ಗುರುಕುಲವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭ ಮಂಗಳೂರು ಶ್ರೀ ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ಧಪೀಠದ ಶ್ರೀ ಪ್ರವೀಣ್‌ರಾಜ್ ಮಚ್ಚೇಂದ್ರನಾಥ ಬಾಬಾ ಸಹಿತ ದೇಶದ ನಾನಾ ರಾಜ್ಯಗಳ ಸಾಧು ಸಂತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ ಟ್ರಸ್ಟಿ ವಿಶ್ವನಾಥ ಸುವರ್ಣ, ಅಧ್ಯಕ್ಷರಾದ ಸುಧಾಕರ್ ಶೆಟ್ಟಿ, ಮಾರ್ಗದರ್ಶಕರಾದ ಗೀತಾಂಜಲಿ ಎಂ. ಸುವರ್ಣ, ಕೋಟ ಆನಂದ ಸಿ. ಕುಂದರ್, ವಿ.ಹಿಂ.ಪ. ಕಾಪು ತಾಲೂಕು ಅಧ್ಯಕ್ಷ ಜಯಪ್ರಕಾಶ್ ಮತ್ತು ಸ್ಥಳದಾನಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.
