ಓಮನ್ ಬಿಲ್ಲವಾಸ್ : ವ್ಯವಹಾರ ಸಂಪರ್ಕ - ತರಬೇತಿ ಕಾರ್ಯಾಗಾರ ಸಂಪನ್ನ
ಓಮನ್ ಬಿಲ್ಲವಾಸ್ ಮುಖೇನ 'ವ್ಯವಹಾರ ಸಂಪರ್ಕ' ಶೀರ್ಷಿಕೆಯಡಿಯಲ್ಲಿ ಬಿಲ್ಲವ ಬಾಂಧವರನ್ನು ಆರ್ಥಿಕವಾಗಿ ಸ್ವಾವಲಂಬಿತರನ್ನಾಗಿಸುವ ಹಾಗೂ ಪರಸ್ಪರ ವ್ಯಾವಹಾರಿಕ ಬೆಂಬಲವನ್ನು ವೃದ್ಧಿಪಡಿಸುವ ತರಬೇತಿ ಕಾರ್ಯಾಗಾರ ಡಿಸೆಂಬರ್ 8ರಂದು ಮಸ್ಕತ್ ನ ಅಜ್ಹೈಭ ಗಾರ್ಡನ್ ಹಾಲ್ ನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯ ಉದ್ಯಮಿಗಳು, ಸ್ವಉದ್ಯೋಗಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ತಮ್ಮ ವ್ಯಾವಹಾರಿಕ ಅನುಭವನ್ನು ಹಂಚಿಕೊಂಡರು ಹಾಗೂ ಯಶಸ್ವೀ ಉದ್ಯಮಿಗಳಾಗುವಲ್ಲಿ ಪರಿಪಾಲಿಸಬೇಕಾದ ಸೂಕ್ಷ್ಮ ವಿಚಾರಗಳನ್ನು ತಿಳಿಸಲಾಯಿತು.
ಅಧ್ಯಕ್ಷರಾದ ಸುಜಿತ್ ಅಂಚನ್ ಮಾತನಾಡಿ ಸಂಘಟನಾತ್ಮಕ ಚಟುವಟಿಕೆಗಳು ಹಾಗೂ ಮುಂಬರುವ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು. ಸ್ಥಾಪಕ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಡಾ. ಅಂಚನ್ ಸಿ. ಕೆ ದಿಕ್ಸೂಚಿ ಭಾಷಣ ನೀಡಿದರು.
ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಹರೀಶ್ ಸುವರ್ಣ ಸ್ವಾಗತಿಸಿದರು. ಶ್ರೀ ಕೃಷ್ಣ ಪ್ರಸಾದ್ ಮತ್ತು ಸುರೇಂದ್ರ ಅಮೀನ್ ಪ್ರಸ್ತಾವನೆಗೈದರು. ಉಮೇಶ್ ಜೆಪ್ಪು ಕಾರ್ಯಕ್ರಮ ನಿರೂಪಿಸಿ, ವಂದನ ರಾಮಕೃಷ್ಣ ವಂದಿಸಿದರು.
