ಪ್ರತಿಷ್ಠಿತ ಹೊಯ್ಸಳ ಪ್ರಶಸ್ತಿಗೆ ಆಯ್ಕೆಯಾದ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು
Thumbnail
ಮಂಗಳೂರು : ಮೈಸೂರಿನ ಹೊಯ್ಸಳ ಕನ್ನಡ ಸಂಘ ಮತ್ತು ಸಿರಿಗನ್ನಡ ಪತ್ರಿಕಾ ಬಳಗ ನೀಡುತ್ತಿರುವ ಪ್ರತಿಷ್ಟಿತ ಹೊಯ್ಸಳ ಪ್ರಶಸ್ತಿಗೆ ಹಿರಿಯ ಸಮಾಜವಿಜ್ಞಾನಿ ಡಾ. ಎಂ ಅಣ್ಣಯ್ಯ ಕುಲಾಲ್ ಉಲ್ತೂರ್ ಆಯ್ಕೆ ಆಗಿದ್ದಾರೆ. ಕಳೆದ ೨೦ ವರ್ಷಗಳಿಂದ ಮೈಸೂರಿನ ಹೊಯ್ಸಳ ಕನ್ನಡ ಸಂಘ ಮತ್ತು ಸಿರಿಗನ್ನಡ ಪತ್ರಿಕಾ ಬಳಗ ನೀಡುತ್ತಿರುವ ಈ ಬಾರಿಯ ಪ್ರಶಸ್ತಿಗೆ ೧೮ ಮಂದಿಯನ್ನು ಆಯ್ಕೆ ಮಾಡಲಾಗಿದೆ. ಕರಾವಳಿ ಮಲೆನಾಡು ಭಾಗದಿಂದ ನಾಡು, ನುಡಿ, ನೆಲ, ಜಲ, ಪರಿಸರ, ಕೃಷಿ ,ಸಮಾಜ ಮುಖಿ ವೈದ್ಯಕೀಯ ಸೇವೆ, ಶಿಕ್ಷಣ, ಸಾಹಿತ್ಯ, ಸಂಘಟನೆಗಳ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
13 Dec 2023, 08:23 PM
Category: Kaup
Tags: