ಜನಪದ ಸ್ವಾಭಿಮಾನದ ಅಭಿವ್ಯಕ್ತಿ : ಡಾ| ಗಣೇಶ ಗಂಗೊಳ್ಳಿ
Thumbnail
ಶಿರ್ವ : ಗ್ರಾಮೀಣ ಜನರು ತಮ್ಮ ಸುಖ, ದು:ಖಗಳ ಸಮ್ಮಿಳಿತ ಬದುಕಿನಲ್ಲಿ ಸ್ವಾಭಿಮಾನದಿಂದ ಜೀವಿಸಿದ ಹಾಗೂ ಸಮಾಜದ ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳುವ ಮನೋಭಾವದ ಅಭಿವ್ಯಕ್ತಿಯೇ ಜನಪದ ಎಂದು ಖ್ಯಾತ ಗಾಯಕ ಡಾ| ಗಣೇಶ ಗಂಗೊಳ್ಳಿ ಹೇಳಿದರು. ಅವರು ಗುರುವಾರ ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಜರಗಿದ 'ಜನಪದ: ಪರಿಶುದ್ಧ ಮನಸ್ಸುಗಳ ಭಾವಪದ' ಕಾರ್ಯಕ್ರಮದಲ್ಲಿ ವಿಚಾರ ಮಂಡಿಸಿ, ಜನಪದ ಗೀತೆಗಳನ್ನು ಪ್ರಸ್ತುತಪಡಿಸಿದರು. ಪಕ್ಕವಾದ್ಯದಲ್ಲಿ ಚಂದ್ರ ಬೈಂದೂರು, ಗುರುಪ್ರಸಾದ್ ಹಾವಂಜೆ ಸಹಕರಿಸಿದರು. ಬೆಳ್ಳೆ ಗ್ರಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಅಶೋಕ್ ತಿರ್ಲಪಲ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲ್ಲೂಕು ಘಟಕದ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಮಾತನಾಡಿ, ಸರಳ ಹಾಗೂ ನೇರ ಸಂಭಾಷಣೆಯ ಜನಪದರ ರಚನೆಗಳು ಯಾವುದೇ ಕೃತಕ ಇಲ್ಲದೆ ಮನಸ್ಸನ್ನು ಮುಟ್ಟುತ್ತವೆ ಎಂದು ಹೇಳಿದರು. ಉದ್ಯಮಿ ಪ್ರಶಾಂತ್ ಶೆಟ್ಟಿ ಪಡುಬೆಟ್ಟು ಪ್ರಧಾನ ಪ್ರಾಯೋಜಕತ್ವ ವಹಿಸಿದ್ದ ಕಾರ್ಯಕ್ರಮದಲ್ಲಿ, ಆಯೋಜಕರಾದ ಕರ್ನಾಟಕ ಸರಕಾರದ ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕೃತ ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಸದಸ್ಯ ಗುರುರಾಜ ಭಟ್ ಎಡ್ಮೇರು, ಸಾಹಿತಿ ರಿಚ್ಚಾರ್ಡ್ ದಾಂತಿ ಪಾಂಬೂರು, ಕೆನರಾ ಬ್ಯಾಂಕ್ ಮೂಡುಬೆಳ್ಳೆ ಹಿರಿಯ ಪ್ರಬಂಧಕ ಡಾ| ಬೊಮ್ಮಾಯಿ, ಕಟ್ಟಿಂಗೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಧರ್ಮದರ್ಶಿ ಕೆ. ದೇವದಾಸ್ ಹೆಬ್ಬಾರ್, ಹಿರಿಯ ದೈವಾರಾಧಕ ಸುಧಾಕರ ಪಾಣಾರ, ನಿವೃತ್ತ ಪ್ರಾಚಾರ್ಯ ಅನಂತ ಮೂಡಿತ್ತಾಯ ಶಿರ್ವಾ, ಹಿರಿಯ ಶಿಕ್ಷಕಿ ಸುನೀತಾ ಕಾಮತ್, ಗ್ರಾಪಂ ಮಾಜಿ ಉಪಾಧ್ಯಕ್ಷೆ ಸಂಧ್ಯಾ ಎಂ. ಶೆಟ್ಟಿ, ಸದಸ್ಯೆ ರಕ್ಷಿತಾ ಉಪಸ್ಥಿತರಿದ್ದರು. ಕ.ಸಾ.ಪ. ಗೌರವ ಕಾರ್ಯದರ್ಶಿ ಅಶ್ವಿನಿ ಲಾರೆನ್ಸ್ ಮೂಡುಬೆಳ್ಳೆ ನಿರೂಪಿಸಿ, ಕಾರ್ಯಕ್ರಮ ಸಂಯೋಜಿಸಿದರು. ಸಂತಾಪ : ಕಾರ್ಯಕ್ರಮದ ಆರಂಭದಲ್ಲಿ ಡಿಸೆಂಬರ್ 12 ರಂದು ನಿಧನ ಹೊಂದಿದ ಕಾಪು ಕರಂದಾಡಿಯ ಸಮಾಜರತ್ನ ಲೀಲಾಧರ ಶೆಟ್ಟಿ ದಂಪತಿಗೆ ಸಂತಾಪ ಸೂಚಿಸಲಾಯಿತು.
14 Dec 2023, 07:58 PM
Category: Kaup
Tags: