ಕಾಪು : ಬಿರುವೆರ್ ಕಾಪು ಟ್ರೋಫಿ - 2023 ಕ್ರಿಕೆಟ್ ಪಂದ್ಯಾಕೂಟದ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆಗೆ ಚಾಲನೆ
Thumbnail
ಕಾಪು : ಬಿರುವೆರ್ ಕಾಪು ಸೇವಾ ಸಮಿತಿ (ರಿ.) ಕಾಪು ಇದರ ಆಶ್ರಯದಲ್ಲಿ ಬಿಲ್ಲವ ಸಮಾಜ ಭಾಂದವರ ಸಹಭಾಗಿತ್ವದಲ್ಲಿ ಸಮಾಜ ಸೇವೆಯ ಸಹಾಯಾರ್ಥವಾಗಿ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಮಟ್ಟದ ಬಿರುವೆರ್ ಕಾಪು ಟ್ರೋಫಿ - 2023 ಕ್ರಿಕೆಟ್ ಪಂದ್ಯಾಕೂಟ ಇದರ ಅಂಗವಾಗಿ ಆಟಗಾರರ (ಬಿಡ್ಡಿಂಗ್) ಹರಾಜು ಪ್ರಕ್ರಿಯೆಯು ಬಿಲ್ಲವರ ಸಹಾಯಕ ಸಂಘ (ರಿ.) ಕಾಪು ಇದರ ಶ್ರೀ ನಾರಾಯಣಗುರು ಸಭಾಭಾವನದಲ್ಲಿ ಸಮಾಜ ಸೇವಕಿ ಗೀತಾಂಜಲಿ ಸುವರ್ಣ ಉದ್ಘಾಟಿಸಿದರು. ಬಿರುವೆರ್ ಕಾಪು ಸೇವಾ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಆರ್ ಕೋಟ್ಯಾನ್ ಕಾಪು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಹನುಮಾನ್ ಕೇಸರಿ ಕಾಪು , ಗೆಳೆಯರ ಬಳಗ ಪಾಂಗಳ ಗುಡ್ಡೆ, ಬಿರುವೆರ್ ಬ್ರದರ್ಸ್ ಹೆಜಮಾಡಿ ,ರೋಯಲ್ ಬಿರುವೆರ್ ಉಡುಪಿ, ಬಿರುವೆರ್ ಅಪೂರ್ವ ಪುತ್ತೂರು, ಪ್ರೇಂಡ್ಸ್ ಬ್ರಹ್ಮಾವರ ಕುಂಜಾಲು, ಆರ್.ಕೆ.ಬ್ರದರ್ಸ್ ಮುದರಂಗಡಿ ,ಸಾಯಿ ಪ್ರೀತಿ ಸ್ಟ್ರೈ ಕರ್ಸ್ ಕಾಪು , ಬಿರುವೆರ್ ಪೊಲಿಪು (ಚಿತ್ರಾಪುರ), ಟೀಮ್ ಗರಡಿ ಜವನೆರ್ ಕಟಪಾಡಿ ಒಟ್ಟು ಹತ್ತು ತಂಡಗಳು ಮತ್ತು ಅದರ ಮಾಲಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಸುಮಾರು 150 ಆಟಗಾರರ ಹರಾಜು ನಡೆಯಿತು. ಬಿರುವೆರ್ ಕಾಪು ಟ್ರೋಫಿಯ ಗೌರವಾಧ್ಯಕ್ಷರಾದ ದೀಪಕ್ ಕುಮಾರ್ ಎರ್ಮಾಳು ತಂಡಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷರಾದ ವಿಕ್ರಂ ಕಾಪು, ಚಂದ್ರಶೇಖರ ಪೂಜಾರಿ ಅಧ್ಯಕ್ಷರು ಆರ್ಯ ಈಡಿಗ ಮಹಾಮಂಡಲ ಉಡುಪಿ ಜಿಲ್ಲೆ, ಸೂರ್ಯನಾರಾಯಣ ಅಧ್ಯಕ್ಷರು ಯುವವಾಹಿನಿ ಕಾಪು ಘಟಕ , ಪ್ರೇಮಾ ಮಹಿಳಾ ಪ್ರತಿನಿಧಿ ಬಿಲ್ಲವರ ಸಹಾಯಕ ಸಂಘ ಕಾಪು , ಪ್ರವೀಣ್ ಪೂಜಾರಿ ಕಾಪು, ವಾಸು ಪೂಜಾರಿ ಇನ್ನಂಜೆ ರವಿರಾಜ್ ಶಂಕರಪುರ, ಯಾದವ್ ಪೂಜಾರಿ ಕಾಪು, ಮಾಧವ ಫೂಜಾರಿ ಕಾಪು ,ಅಶ್ವಿನಿ ನವೀನ್ ಕಾಪು, ಯೋಗೀಶ್ ಪೂಜಾರಿ ಕಾಪು, ಸಂಧ್ಯಾ ಬಾಲಕೃಷ್ಣ ಮಡುಂಬು, ಕಾರ್ತಿಕ್ ವಿ ಸುವರ್ಣ, ವರುಣ್ ಬಿ ಕೋಟ್ಯಾನ್ ಮಡುಂಬು , ಸ್ವರಾಜ್ ಬಂಗೇರ ಕಾಪು , ಸುಜನ್ ಎಲ್ ಸುವರ್ಣ ಶಿರ್ವ, ರಾಕೇಶ್ ಕುಂಜೂರು, ದೇವಿ ಪ್ರಸಾದ್ ಶಿರ್ವ, ಅನಿಲ್ ಅಮಿನ್ ಕಾಪು , ವಿಕ್ಕಿ ಮಡುಂಬು , ಸುಧಾಕರ ಸಾಲ್ಯಾನ್ ಕಾಪು ಉಪಸ್ಥಿತರಿದ್ದರು. ಅತಿಥಿ ಸುವರ್ಣ ಪಾಲಮೆ ನಿರೂಪಿಸಿ ವಂದಿಸಿದರು.
Additional image
15 Dec 2023, 06:32 PM
Category: Kaup
Tags: