ಕಾಪು ಲೀಲಾಧರ ಶೆಟ್ಟಿ ಸಾರ್ವಜನಿಕ ಶ್ರದ್ಧಾಂಜಲಿ ಸಂತಾಪ ಸಭೆ : ಪೂರ್ವಭಾವಿ ಸಭೆ
Thumbnail
ಕಾಪು : ಸಮಾಜರತ್ನ ಕಾಪು ಲೀಲಾಧರ ಶೆಟ್ಟಿಯವರ ಸಾರ್ವಜನಿಕ ಶ್ರದ್ಧಾಂಜಲಿ ಸಂತಾಪ ಸಭೆ ಡಿಸೆಂಬರ್ 18 ರಂದು ನಡೆಸುವ ಬಗ್ಗೆ ಪೂರ್ವಭಾವಿ ಸಭೆಯು ಶುಕ್ರವಾರ ಕಾಪು ಹೊಸ ಮಾರಿಗುಡಿ ದೇವಳದ ಅಭಿವೃದ್ಧಿ ಸಮಿತಿಯ ಕಚೇರಿಯಲ್ಲಿ ಕಾಪು ಬಂಟರ ಸಂಘದ ಅಧ್ಯಕ್ಷರಾದ ಕೆ ವಾಸುದೇವ ಶೆಟ್ಟಿ ಮತ್ತು ಉದ್ಯಮಿ ಮನೋಹರ ಎಸ್. ಶೆಟ್ಟಿಯವರ ಉಪಸ್ಥಿತಿಯಲ್ಲಿ ವಿವಿಧ ಸಮುದಾಯದ ಮುಖಂಡರ ಸಮ್ಮುಖದಲ್ಲಿ ನಡೆಯಿತು. ಡಿಸೆಂಬರ್ 18, ಸೋಮವಾರ ಸಂಜೆ ಗಂಟೆ 3.30ಕ್ಕೆ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಮುಂಭಾಗ ಕಾಪು ಬಂಟರ ಸಂಘದ ಅಂಬಾ ಮಹಾಬಲ ಶೆಟ್ಟಿ ಆವರಣದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಂತಾಪ ಸಭೆಯು ಸರ್ವ ಜಾತಿ, ಸರ್ವ ಧರ್ಮಿಯರ ಸಹಕಾರದೊಂದಿಗೆ ನಡೆಯಲಿದೆ ಎಂದು ಬಂಟರ ಸಂಘದ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ ತಿಳಿಸಿದರು.
Additional image
15 Dec 2023, 11:05 PM
Category: Kaup
Tags: