ಎರ್ಮಾಳು : ಶ್ರೀ ಲಕ್ಷ್ಮಿ ಜನಾರ್ಧನ ದೇಗುಲದಲ್ಲಿ ರಥೋತ್ಸವ ಪ್ರಯುಕ್ತ ಧ್ವಜಾರೋಹಣ ಸಂಪನ್ನ
Thumbnail
ಎರ್ಮಾಳು : ಪುರಾಣ ಪ್ರಸಿದ್ಧ ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ರಥೋತ್ಸವದ ಪ್ರಯುಕ್ತ ಶನಿವಾರ ಬೆಳಗ್ಗೆ ಧ್ವಜಾರೋಹಣ ಸಂಪನ್ನಗೊಂಡಿತು. ದೇವಳದಲ್ಲಿ ಬಯನ ಬಲಿ, ರಂಗ ಪೂಜೆ, ಆಯನೋತ್ಸವ ನೆರವೇರಿತು. ದೇವಳದ ತಂತ್ರಿವರ್ಯರಾದ ರಾಧಾಕೃಷ್ಣ ತಂತ್ರಿ, ಪವಿತ್ರ ಪಾಣಿ ಪೂರ್ಣೇಶ್ ರಾವ್, ಅರ್ಚಕರಾದ ವಿಷ್ಣು ಮೂರ್ತಿ ಉಪಾಧ್ಯಾಯ ಹಾಗೂ ಕೃಷ್ಣಮೂರ್ತಿ ಭಟ್‌ರವರು ಪೂಜಾ ವಿಧಿ ವಿಧಾನ ಪೂರೈಸಿದರು. ಈ ಸಂದರ್ಭ ಅನುವಂಶೀಯ ಮೊಕ್ತೇಸರ ಅಶೋಕ್ ರಾಜ್, ನೈಮಾಡಿ ನಾರಾಯಣ ಶೆಟ್ಟಿ , ಉದಯ ಕೆ. ಶೆಟ್ಟಿ , ಕಿಶೋರ್ ಶೆಟ್ಟಿ , ಅಣ್ಣಾವರ ಕುಟುಂಬಿಕರು, ಪುಚ್ಚೊಟ್ಟು ಬೀಡು ಕುಟುಂಬಿಕರು, ನೈಮಾಡಿ ವಸಂತ ಶೆಟ್ಟಿ, ರೋಹಿತ್ ಹೆಗ್ಡೆ ಎರ್ಮಾಳು, ಸಂತೋಷ್ ಶೆಟ್ಟಿ ಬರ್ಪಾಣಿ, ಸಹಿತ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.
16 Dec 2023, 05:29 PM
Category: Kaup
Tags: