ಡಿಸೆಂಬರ್ 24 : ಕಿನಾರ ವರ್ಣೋತ್ಸವ - ಕಾಪು ತಾಲೂಕಿನ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ
ಎರ್ಮಾಳು : ತೆಂಕ ಕಿನಾರ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಕಾಪು ತಾಲೂಕು ವ್ಯಾಪ್ತಿಯ ಮಕ್ಕಳಿಗೆ ಕಿನಾರ ವರ್ಣೋತ್ಸವ ಚಿತ್ರಕಲಾ ಸ್ಪರ್ಧೆ 24 ಡಿಸೆಂಬರ್ 2023 ನೇ ಅದಿತ್ಯವಾರ ಬೆಳಿಗ್ಗೆ ಗಂಟೆ 9.30ಕ್ಕೆ ಕಿನಾರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ.
3 ರಿಂದ 5 ವರ್ಷದ ಒಳಗಿನ ಮಕ್ಕಳಿಗೆ ರಾಷ್ಟ್ರ ಪಕ್ಷಿಯ ಚಿತ್ರಕ್ಕೆ ಬಣ್ಣ ಹಚ್ಚುವುದು, 1 ರಿಂದ 4 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಾಡು ಪ್ರಾಣಿ, 5 ರಿಂದ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ನಮ್ಮ ಸುಂದರ ಗ್ರಾಮ, 8 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶದಲ್ಲಿ ಭಾರತ ವಿಷಯವಾಗಿದೆ.
ಈ ಮೇಲಿನ ವಿಷಯಗಳಲ್ಲಿ ಸ್ಪರ್ಧೆಗಳು ನಡೆಯಲ್ಲಿದ್ದು ಎಲ್ಲಾ ವಿಭಾಗದಲ್ಲಿ ಪ್ರತ್ಯೇಕ ನಗದು ಬಹುಮಾನ ಪ್ರಥಮ ರೂ. 3,000/- ದ್ವಿತೀಯ ರೂ 2,000/- ತೃತೀಯ ರೂ.1,000/-ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಉಡುಗೊರೆ ನೀಡಿ ಗೌರವಿಸಲಾಗುವುದು.
ಚಿತ್ರ ಬಿಡಿಸಲು 1.30 ಗಂಟೆಗಳ ಸಮಯವಕಾಶವಿದ್ದು, ಬೇಕಾದ ಪರಿಕರಗಳನ್ನು ವಿದ್ಯಾರ್ಥಿಗಳೇ ತರುವುದು. ಡ್ರಾಯಿಂಗ್ ಶೀಟನ್ನು ಸ್ಥಳದಲ್ಲೇ ನೀಡಲಾಗುವುದು.
ಸ್ಪರ್ಧೆಗೆ ಹೆಸರು ನೋಂದಾಯಿಸಲು 2023 ನೇ ಡಿಸೆಂಬರ್ 20 ಕೊನೆಯ ದಿನಾಂಕವಾಗಿದ್ದು, ಮಕ್ಕಳ ಮಾಹಿತಿಯನ್ನು 9632033191, 8105866637 ಗೆ ವಾಟ್ಸ್ ಆಪ್ ( Watsapp ) ಮುಖಾಂತರ ಕಳುಹಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
