ಕಾಪು : ಬಿ.ಜೆ.ಎಂ ಆಡಳಿತ ಸಮಿತಿ - ದುಬೈನಲ್ಲಿ ಯೂತ್ ಐಕಾನ್ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಫಾರೂಕ್ ಚಂದ್ರನಗರರಿಗೆ ಸನ್ಮಾನ
Thumbnail
ಕಾಪು : ದುಬೈನಲ್ಲಿ ಯೂತ್ ಐಕಾನ್ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಫಾರೂಕ್ ಚಂದ್ರನಗರರಿಗೆ ಬದ್ರಿಯಾ ಜುಮ್ಮಾ ಮಸ್ಜಿದ್ ಮಜೂರು-ಮಲ್ಲಾರು ಆಡಳಿತ ಸಮಿತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿ.ಜೆ.ಎಂ ಧರ್ಮಗುರುಗಳಾದ ಅಬ್ದುಲ್ ರಶೀದ್ ಸಖಾಫಿ ಅಲ್-ಖಾಮಿಲ್, ಫಾರೂಕ್ ಚಂದ್ರನಗರ ನಮ್ಮ ಜಮಾತ್ ಕಮಿಟಿಯಲ್ಲಿ ಹಲವು ಹುದ್ದೆ ಪಡೆದು ಉತ್ತಮ ಕೆಲಸ ಮಾಡಿದ್ದಾರೆ ಇದೀಗ ಸಮಾಜ ಸೇವೆಯಲ್ಲಿ ಉತ್ತಮ ಸೇವೆ ನೀಡಿ ವಿದೇಶದಲ್ಲಿ ಯೂತ್ ಐಕಾನ್ ಅಂತಾರಾಷ್ಟ್ರಿಯ ಅವಾರ್ಡ್ ಪಡೆದದ್ದು ನಮ್ಮ ಜಮಾತಿಗೆ ಹೆಮ್ಮೆ ಎಂದರು. ಈ ಸಂದರ್ಭದಲ್ಲಿ ಬಿಜೆಎಂ ಅಧ್ಯಕ್ಷರಾದ ಶಾಬನ್ ಕರಂದಾಡಿ,ಉಪಾಧ್ಯಕ್ಷರಾದ ಅಬ್ದುಲ್ಲ ಪೊಲಿಪು ,ಪ್ರದಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮಲ್ಲಾರು,ಕಾರ್ಯದರ್ಶಿ ಎಂ.ಕೆ ಇಬ್ರಾಹಿಂ ಮಜೂರು,ಸಹ ಕಾರ್ಯದರ್ಶಿ ಶರ್ಫುದ್ದಿನ್ ಕೊಂಬಗುಡ್ಡೆ, ಕೋಶಾಧಿಕಾರಿ ರಫೀಕ್ ಪಕೀರಣಕಟ್ಟೆ, ಜಮಾತ್ ಸದಸ್ಯರಾದ ಶರ್ಫುದ್ದಿನ್ ಶೇಕ್ ಮಜೂರು,ಶಾಬಾನ್ ಮಜೂರು,ಅಬ್ದುಲ್ಲ ಚಂದ್ರನಗರ, ಮಾಜಿ ಅಧ್ಯಕ್ಷರಾದ ಹಾಜಬ್ಬ ಮೊಯಿದಿನ್ ಶಿರ್ವ, ಮೊಯಿದಿನ್ ,ರಝಕ್ ಕರಂದಾಡಿ, ಹಸನಬ್ಬ ಮಜೂರು, ಮಾಜಿ ಪ್ರ.ಕಾರ್ಯದರ್ಶಿ ಶಂಶುದ್ಧಿನ್ ಕರಂದಾಡಿ, ರಝಕ್ ಮಲ್ಲಾರು, ನಜಿರ್ ಮಜೂರು,ಜಮಾತ್ ಸಮಿತಿಯ ಉಸ್ತಾದರುಗಳು, ತಕ್ವಿಯತುಲ್ ಯಂಗ್ ಮೆನ್ಸ್ ಸಮಿತಿಯವರು, ಸಿರಾಜುಲ್ ಹುದಾ ದಫ್ ಸಮಿತಿಯವರು, ಸ್ವಲಾತ್ ಸಮಿತಿ ಕೊಂಬಗುಡ್ಡೆ ಸಮಿತಿಯವರು, ಹಾಗೂ ಜಮಾತಿಗರು ಇನ್ನಿತರರು ಉಪಸ್ಥಿತರಿದ್ದರು.
18 Dec 2023, 07:08 AM
Category: Kaup
Tags: