ಕಾಪು : ಗೆಳೆಯರ ಬಳಗ ಬಂಗ್ಲೆ ಮೈದಾನ - 32ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ; ಆಮಂತ್ರಣ ಪತ್ರಿಕೆ ಬಿಡುಗಡೆ
Thumbnail
ಕಾಪು : ಗೆಳೆಯರ ಬಳಗ ಬಂಗ್ಲೆ ಮೈದಾನದ ವತಿಯಿಂದ ಜನವರಿ 7, ಆದಿತ್ಯವಾರದಂದು ನಡೆಯಲಿರುವ 32ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ರವಿವಾರ ಕಾಪು ಉಳಿಯಾರಗೋಳಿ ಹಾಲು ಉತ್ಪಾದಕರ ಸಂಘದ ವಠಾರದಲ್ಲಿ ಉದ್ಯಮಿ ಶ್ರೀಧರ ಆಚಾರ್ಯ ಚಂದ್ರನಗರ ಬಿಡುಗಡೆಗೊಳಿಸಿದರು. ಜನವರಿ 7, ಆದಿತ್ಯವಾರದಂದು ಬೆಳಗ್ಗೆ 10 ಗಂಟೆಗೆ ಮಾಣಿಯೂರು ಶ್ರೀ ಸೂರ್ಯಕಾಂತ ಆಚಾರ್ಯ ನೇತೃತ್ವದಲ್ಲಿ ಕಾಪು ಬಂಗ್ಲೆ ಮೈದಾನದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯ ನಡೆಯಲಿದ್ದು, ಮಧ್ಯಾಹ್ನ ಗಂಟೆ 12:30 ರಿಂದ ಶ್ರೀ ಲಕ್ಷ್ಮೀಜನಾರ್ದನ ಮಹಿಳಾ ಭಜನಾ ಮಂಡಳಿ ಕಾಪು ಇವರಿಂದ ಭಜನಾ ಕಾರ್ಯಕ್ರಮವೂ ಜರಗಲಿದೆ. ತದನಂತರ ಅನ್ನಸಂತರ್ಪಣೆ ಜರಗಲಿದೆ. ಈ ಸಂದರ್ಭ ಬಳಗದ ಅಧ್ಯಕ್ಷ ಜಯ ಶೆಟ್ಟಿ, ಸದಸ್ಯರಾದ ರವೀಂದ್ರ ಎಂ ಸತೀಶ್ ಕಲ್ಯಾ, ನಾಗರಾಜ್ ಹೆಚ್ ಕೆ., ರಾಘು ಕಲ್ಯಾಲು, ಸುನಿಲ್ ಸಾಲ್ಯಾನ್, ವೆಂಕಟೇಶ್, ಸುರೇಶ್ ದೇವಾಡಿಗ, ಲವ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
Additional image
18 Dec 2023, 07:11 AM
Category: Kaup
Tags: