ಉಡುಪಿ : ಇತಿಹಾಸ ಪ್ರಸಿದ್ಧ ವರ್ತೆ ಕಲ್ಕುಡ ದೈವಸ್ಥಾನ, ಬಜೆ ತಂಗಾಣ : ಕಾಲಾವಧಿ ಸಿರಿ ಸಿಂಗಾರದ ನೇಮ ಸಂಪನ್ನ
Thumbnail
ಉಡುಪಿ : ಇತಿಹಾಸ ಪ್ರಸಿದ್ಧ 110 ವರ್ಷಗಳ ಇತಿಹಾಸವಿರುವ ವರ್ತೆ ಕಲ್ಕುಡ ದೈವಸ್ಥಾನ, ಬಜೆ ತಂಗಾಣ ಇಲ್ಲಿಯ ಕಾಲಾವಧಿ ಸಿರಿಸಿಂಗಾರದ ನೇಮ ಶನಿವಾರ ಜರಗಿತು. ಸಂಜೆ ಭಜನೆ ಕಾರ್ಯಕ್ರಮ ಹಾಗೂ ರಾತ್ರಿ ಹೂವಿನ ಪೂಜೆ ದೈವದ ದರ್ಶನ ಸೇವೆ ಮಹಾ ಅನ್ನ ಸಂತರ್ಪಣೆ ತದನಂತರ ದೈವಗಳ ನೇಮ ಸೇವೆ ಜರಗಿತು. ಸನ್ಮಾನ : ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಅನುಭವಿ ದೈವ ನರ್ತಕರಾದ ಬೀರು ಪಾಣರ, ಸಮಾಜ ಸೇವಕ, ದೈವಾರಾಧನೆ, ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವಿನೋದ್ ಶೆಟ್ಟಿ, ದೈವಾರಾಧನೆ ಕ್ಷೇತ್ರ ಹಾಗೂ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸಿರುವ ಹಿರಿಯರಾದ ಬಾಲಕೃಷ್ಣ ಶೆಟ್ಟಿ ಪೆರ್ಡೂರನ್ನು ತಂಗಾಣ ಕುಟುಂಬಸ್ಥರ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮುಖ್ಯಸ್ಥರಾದ ಸುಧಾಕರ್ ಶೆಟ್ಟಿ ಕುಟುಂಬದ ಹಿರಿಯರಾದ ಸುಂದರ ಶೆಟ್ಟಿ ಹಾಗೂ ಕೃಷ್ಣ ಶೆಟ್ಟಿ, ಮೋಹನ ಶೆಟ್ಟಿ, ಸುರೇಶ್ ಶೆಟ್ಟಿ, ಗಣೇಶ ಶೆಟ್ಟಿ, ವಿಜಯ್ ಶೆಟ್ಟಿ, ಕೃಷ್ಣ ಪೂಜಾರಿ ಹಾಗೂ ಕುಟುಂಬಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು.
Additional image
18 Dec 2023, 03:47 PM
Category: Kaup
Tags: