ಡಿಸೆಂಬರ್ 23 : ಶ್ರೀ ಧೂಮಾವತಿ ದೈವಸ್ಥಾನ ಎರ್ಮಾಳು ಬಡಾ - ನೇಮೋತ್ಸವ
Thumbnail
ಎರ್ಮಾಳು : ಬಡಾ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಡಿಸೆಂಬರ್ 23 ರಂದು ವಾರ್ಷಿಕ ನೇಮೋತ್ಸವ ಜರಗಲಿದೆ. ಡಿಸೆಂಬರ್ 22, ಶುಕ್ರವಾರ ಮಧ್ಯಾಹ್ನ ಗಂಟೆ 3 ಕ್ಕೆ ನೂತನ ಬೆಳ್ಳಿಯ ನಗ, ನಾಣ್ಯಗಳನ್ನು ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದಿಂದ ಮೆರವಣಿಗೆಯ ಮೂಲಕ ದೈವಸ್ಥಾನಕ್ಕೆ ಸಮರ್ಪಿಸಲಾಗುವುದು. ಸಂಜೆ ಶ್ರೀ ಧೂಮಾವತಿ ದೈವದ ದರ್ಶನ, ಧ್ವಜಾರೋಹಣ ಜರಗಲಿದ್ದು, ಡಿಸೆಂಬರ್ 23, ಶನಿವಾರ ನೇಮೋತ್ಸವದಂದು ಭಂಡಾರ ಇಳಿದ ನಂತರ ರಾತ್ರಿ ಘಂಟೆ 8 ಕ್ಕೆ ಸುರೇಶ ಗೋಪಾಲ ಶೆಟ್ಟಿ ಮತ್ತು ಕುಟುಂಬಿಕರು, ಮಾತೋಶ್ರೀ, ಎರ್ಮಾಳು ಬಡಾ ಇವರ ವತಿಯಿಂದ ಅನ್ನಸಂತರ್ಪಣೆ ಹಾಗೂ ಕುಮಾರ ಜಿ.ಶೆಟ್ಟಿ ಮಾತೋಶ್ರೀ, ಎರ್ಮಾಳು ಬಡಾ ಮತ್ತು ಎರ್ಮಾಳು ನೈಮಾಡಿ ಶ್ರೀ ನಾರಾಯಣ ಕೆ. ಶೆಟ್ಟಿ ಇವರ ವತಿಯಿಂದ ಹೂವಿನ ಅಲಂಕಾರ ಸೇವೆ ಜರಗಲಿರುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
21 Dec 2023, 08:25 AM
Category: Kaup
Tags: