ಕಾಪು : ಅಭಿನಂದನ ಸಮಿತಿಯಿಂದ ಚಂದ್ರನಗರದಲ್ಲಿ ಸಮಾಜ ಸೇವೆಯ ಸಾಧಕತ್ರಯರಿಗೆ ಸನ್ಮಾನ
Thumbnail
ಕಾಪು : ಔದ್ಯೋಗಿಕ ನೆಲೆಯಲ್ಲಿ ಕ್ರಿಯಾಶೀಲತೆಯನ್ನು ಹೊಂದಿ ಅದರಿಂದ ಬಂದ ಒಂದಷ್ಟು ಅಂಶವನ್ನು ಸಮಾಜ ಸೇವೆಗೆ ಬಳಸುವ ಮನಸ್ಸು ಎಲ್ಲರಿಗೂ ಬರುವುದಿಲ್ಲ ಅಂತಹ ನಿಸ್ವಾರ್ಥ ಉದ್ದೇಶದ ಸಾಧಕರನ್ನು ಗುರುತಿಸುವುದು ಸಂತಸ ತಂದಿದೆ ಎಂದು ಮಜೂರು ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಅಬ್ದುಲ್ ರಶೀದ್ ಸಖಾಫಿ ಹೇಳಿದರು. ಅವರು ಗುರುವಾರ ಕಾಪು ಚಂದ್ರನಗರ ಬಟರ್ ಫ್ಲೈ ಅತಿಥಿ ಗೃಹದ ಸಭಾಂಗಣದಲ್ಲಿ ಕಾಪು ಅಭಿನಂದನ ಸಮಿತಿಯಿಂದ ನಡೆದ ಸಾಧಕರ ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸನ್ಮಾನ : ಯುಎಇ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ದುಬೈ ವತಿಯಿಂದ ಸಮಾಜ ಸೇವೆಗಾಗಿ ಕೊಡಮಾಡುವ 2023 ಸಾಲಿನ ದುಬೈ ಗಡಿನಾಡು ಉತ್ಸವದಲ್ಲಿ ಯೂತ್ ಐಕಾನ್ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಕಾಪುವಿನ ಸಮಾಜ ಸೇವಕ ಉದ್ಯಮಿ ಮೊಹಮ್ಮದ್ ಫಾರೂಕ್ ಚಂದ್ರನಗರ ಹಾಗೂ ಸಮಾಜ ಬಂಧು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕಲಿಮ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಡಾ| ಸಿಬ್ಗತ್ ಉಲ್ಲಾ ಶರೀಫ್‌ ಹಾಗೂ ಕೇರಳ ರಾಜ್ಯದ ಗಡಿನಾಡ ಸಾಹಿತ್ಯ ಅಕಾಡೆಮಿಯಿಂದ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕಾಪುವಿನ ಸಮಾಜ ಸೇವಕ ದಿವಾಕರ ಬಿ. ಶೆಟ್ಟಿ ಕಳತ್ತೂರು ಇವರನ್ನು ಗಣ್ಯರು, ಅಭಿಮಾನಿಗಳು ಸನ್ಮಾನಿಸಿದರು. ಈ ಸಂದರ್ಭ ಅಬೂಬಕ್ಕರ್ ಪರ್ಕಳ, ವಿಶ್ವನಾಥ ಪೂಜಾರಿ ಗರಡಿಮನೆ, ಶೇಖರ್ ಬಿ‌. ಶೆಟ್ಟಿ ಕಳತ್ತೂರು, ಅರುಣಾಕರ ಶೆಟ್ಟಿ ಕಳತ್ತೂರು, ಚಂದ್ರನಗರ ಕ್ರೆಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್ ನ ಸ್ಥಾಪಕ ಅಧ್ಯಕ್ಷ ಸಂಶುದ್ದೀನ್ ಯೂಸುಫ್, ಕೆಪಿಸಿಸಿ ಎನ್.ಆರ್.ಐ ವಿಂಗ್ ಅಧ್ಯಕ್ಷ ಶೇಖ್ ವಾಹಿದ್ ದಾವೂದ್, ಉಮ್ಮರಬ್ಬ ಚಂದ್ರನಗರ ಉಪಸ್ಥಿತರಿದ್ದರು. ಅಭಿನಂದನಾ ಸಮಿತಿ ಪ್ರಧಾನ ಸಂಚಾಲಕ ದಿವಾಕರ್ ಡಿ. ಶೆಟ್ಟಿ ಸ್ವಾಗತಿಸಿದರು. ದಿನೇಶ್ ಆಚಾರ್ಯ ಶಿರ್ವ ಅಭಿನಂದನಾ ಪತ್ರ ವಾಚಿಸಿದರು. ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
21 Dec 2023, 05:10 PM
Category: Kaup
Tags: