ಬಂಟಕಲ್ಲು ಇಂಜಿನಿಯರಿಂಗ್‌ ಕಾಲೇಜಿನಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ
Thumbnail
ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗವು ಐಎಸ್‌ಟಿಇ ಘಟಕ ಸಹಯೋಗದೊಂದಿಗೆ ಡಿಸೆಂಬರ್ 20 ರಂದು ಭಾರತೀಯ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ 136 ನೇ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಆಚರಿಸಲಾಯಿತು. ಎನ್‌ಐಟಿಕೆ, ಸುರತ್ಕಲ್‌ ನ ಎಮ್‌ಎಸಿಎಸ್ ವಿಭಾಗ ಪ್ರಾಧ್ಯಾಪಕರಾದ ಡಾ. ಎಸ್ ಎಮ್ ಹೆಗ್ಡೆ, ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಅವರು ಗಣಿತವನ್ನು ವಿಜ್ಞಾನದ ತಾಯಿ ಎಂದು ಏಕೆ ಕರೆಯುತ್ತಾರೆ ಮತ್ತು ಪ್ರಕೃತಿಯಲ್ಲಿ ಗಣಿತವನ್ನು ಹೇಗೆ ಕಂಡುಹಿಡಿಯ ಬಹುದೆಂದು ವಿವರಿಸಿದರು. ವೈದ್ಯಕೀಯ ವಿಜ್ಞಾನ, ನೆಟ್ ವರ್ಕ್ ವಿಜ್ಞಾನ ಮುಂತಾದವುಗಳಲ್ಲಿ ಗಣಿತವನ್ನು ಹೇಗೆ ಬಳಸಬಹುದು ಎಂಬುದನ್ನು ನಿಜ ಜೀವನದ ಉದಾಹರಣೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು ಹಾಗೂ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದುದ್ದಕ್ಕೂ ಗಣಿತದ ಕಲಿಕೆಯನ್ನು ಮುಂದುವರಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಕಳೆದ ಸಾಲಿನ ಸೆಮಿಸ್ಟರ್ ಪರೀಕ್ಷೆಯಲ್ಲಿ ಗಣಿತದಲ್ಲಿ ನೂರು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ವಿವಿಧ ಭಾಗದ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕಾತ್ಯಾಯಿನಿ ಮತ್ತು ದೀಕ್ಷಾ ಪೈ ನಿರೂಪಿಸಿದರು.
22 Dec 2023, 05:41 PM
Category: Kaup
Tags: