ಮುಲ್ಕಿ ಸೀಮೆ ಅರಸು ಕಂಬಳ - ಅರಸು ಪ್ರಶಸ್ತಿ ಪ್ರದಾನ
Thumbnail
ಮುಲ್ಕಿ: ಚಾರಿಟೆಬಲ್ ಟ್ರಸ್ಟ್ ಹಾಗೂ ಹಳೆಯಂಗಡಿ ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ಮುಲ್ಕಿ ಸೀಮೆ ಅರಸು ಕಂಬಳದ ಅಂಗವಾಗಿ ಅರಸು ಪ್ರಶಸ್ತಿ ಪ್ರದಾನ ಸಮಾರಂಭ ಪಡು ಪಣಂಬೂರು ಮುಲ್ಕಿ ಅರಮನೆಯ ಕಾಂತಾಬಾರೆ ಬೂದಾಬಾರೆ ಧರ್ಮಚಾವಡಿಯಲ್ಲಿ ನಡೆಯಿತು. ಸನ್ಮಾನ : ಮೈಸೂರು ಸಂಸ್ಥಾನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಕಂಬಳ ಕ್ಷೇತ್ರದಲ್ಲಿನ ಸಾಧನೆಗೆ ದಿ. ಪಯ್ಯೊಟ್ಟು ಸದಾಶಿವ ಸಾಲ್ಯಾನ್ (ಮರಣೋತ್ತರ), ಸಾಮಾಜಿಕ ಕ್ಷೇತ್ರದಲ್ಲಿ ಉತ್ರುಂಜೆ ಭುಜಂಗ ಎಂ. ಶೆಟ್ಟಿ, ತುಳು- ಸಾಂಸ್ಕೃತಿಕ ಕ್ಷೇತ್ರದಲ್ಲಿ ನವೀನ್ ಶೆಟ್ಟಿ ಎಡ್ಮೆಮಾ‌ರ್, ಕೃಷಿ ಕ್ಷೇತ್ರದ ಸಾಧಕ ಗಂಗಾಧರ ದೇವಾಡಿಗ, ಕ್ರೀಡಾ ಕ್ಷೇತ್ರದಲ್ಲಿ ಸುಷ್ಮಾ ತಾರಾನಾಥ್‌, ವೈದ್ಯಕೀಯ ಕ್ಷೇತ್ರದಲ್ಲಿ ಹಳೆಯಂಗಡಿಯ ಡಾ.ಗುರುಪ್ರಸಾದ್ ನಾವಡರವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು ವಹಿಸಿದ್ದರು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮೈಸೂರಿನ ಡಾ. ಉಮೇಶ್, ಕ್ಯಾ. ಬ್ರಿಜೇಶ್ ಚೌಟ, ಗೋಕುಲ್ ದಾಸ್ ಪೈ, ಚಿತ್ತರಂಜನ್ ಬೋಳಾರ, ದಿವಾಕರ ಕದ್ರಿ, ವಿವೇಕ್ ಆಳ್ವ ಮೂಡುಬಿದಿರೆ, ರಂಜಿತ್ ಕೋಟ್ಯಾನ್, ಟ್ರಸ್ಟ್‌ ನ ಗೌತಮ್ ಜೈನ್ ಮುಲ್ಕಿ ಅರಮನೆ, ಮೋಹನ್ ದಾಸ್ ಸುರತ್ಕಲ್, ರಾಮಚಂದ್ರ ನಾಯಕ್ ಕೊಲ್ನಾಡು ಗುತ್ತು, ಪ್ರಿಯ ದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್.ವಸಂತ ಬೆರ್ನಾರ್ಡ್ ಮತ್ತಿತರರು ಉಪಸ್ಥಿತರಿದ್ದರು. ಗಣೇಶ್‌ ಅಮೀನ್ ಸಂಕಮಾರ್ ನಿರೂಪಿಸಿದರು.
25 Dec 2023, 10:37 AM
Category: Kaup
Tags: