ಹೆಬ್ರಿ ತಾಲೂಕು ಕುಲಾಲ ಸಂಘದ ಪ್ರಥಮ ವರ್ಷದ ಕ್ರೀಡಾಕೂಟ ಸಂಪನ್ನ
Thumbnail
ಹೆಬ್ರಿ : ಕುಲಾಲ ಸಂಘ ಹೆಬ್ರಿ ತಾಲೂಕು ಇದರ ವತಿಯಿಂದ ಪ್ರಥಮ ವರ್ಷದ ಕ್ರೀಡಾಕೂಟವು ಆದಿತ್ಯವಾರ ಹೆಬ್ರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಜರಗಿತು. ಹೆಬ್ರಿಯ ಉದ್ಯಮಿ ಬನಶಂಕರಿ ವರ್ಕ್ಸ್ ನ ಮಾಲಕರಾದ ಐತು ಕುಲಾಲ್ ಕನ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕುಲಾಲ ಸಂಘ ಹೆಬ್ರಿ ತಾಲೂಕು ಇದರ ಅಧ್ಯಕ್ಷರಾದ ಸುರೇಂದ್ರ ಕುಲಾಲ್ ವರಂಗ ಇವರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಮಟ್ಟದ ಕ್ರಿಕೆಟ್ ಪ್ರತಿಭೆ ಮಡಮಕ್ಕಿ ಸೃಜನ ಕುಲಾಲ್, ಸಂಘದ ಗೌರವಾಧ್ಯಕ್ಷರಾದ ಬೇಳಂಜೆ ಭೋಜ ಕುಲಾಲ್, ಉಪಾಧ್ಯಕ್ಷರಾದ ಚಾರ ಅಣ್ಣಪ್ಪ ಕುಲಾಲ್, ಹೆಬ್ರಿ ಶ್ರೀರಾಮ್ ಜುವೆಲರ್ಸ್ ಮಾಲಕರಾದ ಕೆ ನಾರಾಯಣ ಕುಲಾಲ್, ಶಿವಪುರ ಸಂಘದ ಅಧ್ಯಕ್ಷರಾದ ಉದಯ ಕುಲಾಲ್ , ಶಿವಪುರ ಶಾಲೆಯ ಮುಖ್ಯ ಶಿಕ್ಷಕಿ ಗುಲಾಬಿ ಕುಲಾಲ್, ಸುಮಿತ್ರ ಕುಲಾಲ್ ಬೆಪ್ಡಿ, ಕಾರ್ಯದರ್ಶಿ ಭಾಸ್ಕರ್ ಕುಲಾಲ್, ಕ್ರೀಡಾ ಕಾರ್ಯದರ್ಶಿಗಳಾದ ಸತೀಶ್ ಕುಲಾಲ್ ಮಡಮಕ್ಕಿ, ಪ್ರಸನ್ನ ಕುಲಾಲ್ ವರಂಗ, ರಾಜು ಕುಲಾಲ್ ಮುದ್ರಾಡಿ, ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗಣೇಶ್ ಕುಲಾಲ್ ಮುದ್ರಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕೋಶಾಧಿಕಾರಿ ಬೆಳಂಜೆ ಜಯರಾಮ್ ಕುಲಾಲ್ ವಂದಿಸಿದರು.
25 Dec 2023, 06:20 PM
Category: Kaup
Tags: