ಕಾಪು : ಕಿಡ್ನಿ ಮರುಜೋಡಣೆ ಶಸ್ತ್ರ ಚಿಕಿತ್ಸೆ ನಡೆಸಲು ಧನಸಹಾಯ ನೀಡಿ ಆಗೋಣ ಸಹಕಾರಿ
Thumbnail
ಕಾಪು : ಸೂರ್ಯನಗರ ಕಳತೂರ್ ಪಯ್ಯಾರ್ ಸಮೀಪದ ಜಾಮಿಯಾ ಮಸೀದಿಗೆ ಒಳಪಟ್ಟಂತಹ ಪರೀಧಾ ಎಂಬ ತಾಯಿಯ ಮಗನಾದ ಇಮ್ತಿಯಾಜ್ ಎಂಬ ಸಹೋದರನ ಎರಡೂ ಕಿಡ್ನಿ ವೈಫಲ್ಯಗೊಂಡು ವೈದ್ಯರ ಸಲಹೆಯಂತೆ ಹೊಸ ಕಿಡ್ನಿ ಜೋಡಿಸಿದರೆ ಮಾತ್ರ ಬದುಕುಳಿಯಲು ಸಾಧ್ಯ ಎಂದಾಗ ದಿಕ್ಕೇ ತೋಚದ ಕುಟುಂಬದಲ್ಲಿ ಅವರ ಕಿಡ್ನಿ ಮರುಜೋಡಣೆಗಾಗಿ ತನ್ನ ಸ್ವಂತ ತಂಗಿ ಒಂದು ಕಿಡ್ನಿಯನ್ನು ದಾನ ಮಾಡುತ್ತಿದ್ದಾರೆ. ಅಂದಾಜು ಮೊತ್ತ 20 ಲಕ್ಷ ರೂಪಾಯಿಗಳ ಅವಶ್ಯಕತೆ ಇದೆ. ಇಮ್ತಿಯಾಜ್‌ಗೆ ಚಿಕ್ಕ ವಯಸ್ಸಿನ ಸಣ್ಣ ಎರಡು ಹೆಣ್ಣು ಮಕ್ಕಳು ಇದ್ದು ಮೆಕಾನಿಕ್ ದುಡಿಮೆಯ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಒಂದು ಚಲ ಇತ್ತು. ಆದರೆ ಸೃಷ್ಟಿಕರ್ತನ ವಿಧಿ ಬೇರೆ ಆಗಿತ್ತು. ಮನೆಗೆ ಆಧಾರಸ್ತಂಭವಾಗಿದ್ದ ಸಹೋದರನ ಪರಿಸ್ಥಿತಿಯಿಂದ ಮನೆಯವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಈ ಕುಟುಂಬಕ್ಕೆ ತಮ್ಮ ಕೈಲಾದ ಸಹಾಯ ಮಾಡಿ ಸಹಕರಿಸಿ ಹಾಗೂ ಆದಷ್ಟು ಶೇರ್ ಮಾಡಿ ಸಹಕರಿಸಿ.
28 Dec 2023, 08:25 PM
Category: Kaup
Tags: