ಪಲಿಮಾರು : ಅವಿರತ ಪ್ರಯತ್ನದಿಂದ ಮಾತ್ರ ಸಾಧನೆಯ ಮೆಟ್ಟಿಲನ್ನು ಹತ್ತಲು ಸಾಧ್ಯ - ಪ್ರಸಾದ್ ಪಲಿಮಾರು
Thumbnail
ಪಲಿಮಾರು : ಸೂರ್ಯನಂತೆ ನಿನ್ನನ್ನು ನೀನು ಸುಟ್ಟರೆ ಮಾತ್ರ ಪ್ರಕಾಶಮಾನವಾಗಿ ಜಗತ್ತಿಗೆ ಬೆಳಕನ್ನು ನೀಡಲು ಸಾಧ್ಯ. ಜಗತ್ತಿನ ಯಾವುದೇ ಕ್ರೀಡಾಪಟುಗಳು ಒಂದು ದಿನದಲ್ಲಿ ಯಶಸ್ವಿ ಆಗಲಿಲ್ಲ. ಅವಿರತ ಪ್ರಯತ್ನದಿಂದ ಮಾತ್ರ ಸಾಧನೆಯ ಮೆಟ್ಟಿಲನ್ನು ಹತ್ತಲು ಸಾಧ್ಯ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಪ್ರಸಾದ್ ಪಲಿಮಾರು ಹೇಳಿದರು. ಅವರು ಸಂಸ್ಥೆಯ ವಾರ್ಷಿಕ ಕ್ರೀಡಾಕೂಟದ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಪಲಿಮಾರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಸೌಮ್ಯಲತ ಶೆಟ್ಟಿ ಅವರು ಧ್ವಜಾರೋಹಣಗೈದರು. ಉಪಾಧ್ಯಕ್ಷರಾದ ರಾಯೇಶ್ವರ ಪೈ ಕ್ರೀಡಾಳುಗಳ ಗೌರವ ರಕ್ಷೆ ಸ್ವೀಕರಿಸಿದರು. ಪಲಿಮಾರು ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷೆ ಗಾಯತ್ರಿ ಡಿ.ಪ್ರಭು, ನವೀನ್ ಚಂದ್ರ ಸುವರ್ಣ, ಸದಸ್ಯ ಪ್ರವೀಣ್ ಕುಮಾರ್ ಅಡ್ವೆ, ಸುಜಾತಾ, ರಶ್ಮಿ, ಯೋಗೀಶ್ ಸುವರ್ಣ, ಹೊಯ್ಗೆ ಪ್ರೆಂಡ್ಸ್ ಹೊಯ್ಗೆ ಸಂಸ್ಥೆಯ ಕಾರ್ಯದರ್ಶಿ ಸತೀಶ್ ಕುಮಾರ್, ದಾನಿಗಳಾದ ಜೋಸೆಫ್ ಡಿಸೋಜ ಮತ್ತು ಮೇರಿಲಿನ್ ಡಿಸೋಜ ಯು.ಎಸ್.ಎ., ರವೀಂದ್ರ ಪ್ರಭು ಪಲಿಮಾರು, ಸಂಸ್ಥೆಯ ಪ್ರಾಂಶುಪಾಲರಾದ ಗ್ರೆಟ್ಟಾ ಮೊರಾಸ್ ಉಪಸ್ಥಿತರಿದ್ದರು. ಪ್ರೌಢಶಾಲಾ ಹಿರಿಯ ಸಹಶಿಕ್ಷಕಿ ಸುನಿತಾ ಸ್ವಾಗತಿಸಿದರು. ಶಿಕ್ಷಕರಾದ ಪಿಲಾರು ಸುಧಾಕರ್ ಶೆಣೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Additional image Additional image Additional image
29 Dec 2023, 09:39 PM
Category: Kaup
Tags: