ಮಾತೃಜ ಸೇವಾ ಸಿಂಧು ನಿಟ್ಟೆ : 17 ಹಾಗೂ 18 ನೇ ಸೇವಾ ಯೋಜನೆ ಹಸ್ತಾಂತರ
ಕಾರ್ಕಳ : ಇಲ್ಲಿಯ ನಿಟ್ಟೆಯ ಮಾತೃಜ ಸೇವಾ ಸಿಂಧು ವತಿಯಿಂದ ಮೂಡಬಿದ್ರೆಯ 4 ವರ್ಷದ ಮಗು ಹಾಗೂ ಕಿನ್ನಿಗೋಳಿಯ 6 ತಿಂಗಳ ಮಗುವಿಗೆ ಆರ್ಥಿಕ ಸಹಾಯವನ್ನು ಹಸ್ತಾಂತರಿಸಲಾಯಿತು.
ಕಿನ್ನಿಗೋಳಿಯ ಪೂಜಿತ್ ಶೆಟ್ಟಿಗಾರ್ ಎಂಬ 6 ತಿಂಗಳಿನ ಮಗು ಕಣ್ಣಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಪ್ರಸ್ತುತ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಚಿಕಿತ್ಸೆಗೆ ಸುಮಾರು 15 ಲಕ್ಷದ ಅವಶ್ಯಕತೆ ಹಾಗೆಯೇ ಮೂಡಬಿದ್ರೆಯ ಕಲ್ಲಮುಂಡ್ಕೂರು ಕುದ್ರಿಪದವುನ 4 ವರ್ಷದ ಯಶಿಕಾ ಎಂಬ ಪುಟ್ಟ ಕಂದಮ್ಮ RHABDOMYOSARCOMA ಎಂಬ ಕಾಯಿಲೆಯಿಂದ ಬಳಲುತ್ತಿದ್ದು ಪ್ರಸ್ತುತ ಮಂಗಳೂರಿನ ಕೆ.ಎಂ.ಸಿ ಅತ್ತಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆಗೆ ಅಷ್ಟೊಂದು ದೊಡ್ಡ ಮೊತ್ತ ಕೊಡಿಸಲು ಸಾಧ್ಯವಾಗದ ಈ ಎರಡು ಕುಟುಂಬ ಮಾತೃಜ ಸೇವಾ ಸಿಂಧು ತಂಡಕ್ಕೆ ಮನವಿಯನ್ನು ಸಲ್ಲಿಸಿದ್ದರು.
ಎರಡು ಕುಟುಂಬದ ಮನವಿಗೆ ಸ್ಪಂದಿಸಿದ ತಂಡದ ಸದಸ್ಯರು ಡಿಸೆಂಬರ್ 18ರಂದು ನಡೆದ ಸೂಡ ಷಷ್ಠಿ ಹಾಗೂ ಕಡoದಲೆ ಷಷ್ಠಿ ಮಹೋತ್ಸವದಲ್ಲಿ ಭವತಿ ಭಿಕ್ಷಾಂದೇಹಿ ಕಾರ್ಯಕ್ರಮದಲ್ಲಿ ಸಂಗ್ರಹವಾದ ಒಟ್ಟು ಹಣದಲ್ಲಿ ತಲಾ ರೂ. 61,000 ರಂತೆ ಎರಡು ಕುಟುಂಬಕ್ಕೆ ಶ್ರೀ ಮಾರಿಯಮ್ಮ ದೇವಸ್ಥಾನ ಕಾರ್ಕಳದಲ್ಲಿ ತಂಡದ ಸದಸ್ಯರ ಸಮ್ಮುಖದಲ್ಲಿ ಕುಟುಂಬದ ಕೈಗೆ ಹಸ್ತಾಂತರಿಸಿದರು.
ಇದು ಮಾತೃಜ ಸೇವಾ ಸಿಂಧು ತಂಡದ 17 ಹಾಗೂ 18 ನೇ ಸೇವಾ ಯೋಜನೆಯಾಗಿದ್ದು ಈ ತಂಡದೊಂದಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಯನ್ನು ಸಂಘಟಕರು ತಿಳಿಸಿದ್ದಾರೆ.
