ಉಚ್ಚಿಲ : ವೇ.ಮೂ. ರಾಘವೇಂದ್ರ ಉಪಾಧ್ಯಾಯ ದಂಪತಿಗಳ ಷಷ್ಠ್ಯಬ್ಧಪೂರ್ತಿ ಸಮಾರಂಭ
Thumbnail
ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯ ಮತ್ತು ಸುಗುಣ ಉಪಾಧ್ಯಾಯರ ಷಷ್ಠ್ಯಬ್ಧ ಪೂರ್ತಿ ಮತ್ತು ಮೊಗವೀರ ಮುಂದಾಳು ನಾಡೋಜ ಜಿ ಶಂಕರ್ ಸೇರಿದಂತೆ ವಿವಿಧ ಸಾಧಕರಿಗೆ ಸಹಕಾರ ರತ್ನ ಬಿರುದನ್ನು ನೀಡುವ ಕಾರ್ಯಕ್ರಮ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದಲ್ಲಿ ಜರಗಿತು. ಇದರ ಪ್ರಯುಕ್ತ ಶ್ರೀ ದೇವರಿಗೆ ನವಕ ಕಲಶ, ಧಾರ್ಮಿಕ ಉಪನ್ಯಾಸ, ಮಹಾರಂಗಪೂಜೆ, ಉತ್ಸವ ಬಲಿ, ಯಜುರ್ವೇದಿಯ ಬೋಧಾಯನ ಶಾಂತಿ ಸಂಗ್ರಹ ಪುಸ್ತಕ ಬಿಡುಗಡೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರಗಿತು. ಸಾಧಕರಿಗೆ ಪ್ರಶಸ್ತಿ : ಈ ಸಂದರ್ಭ ಅದಮಾರು ಹಿರಿಯ ಸ್ವಾಮೀಜಿ ಶ್ರೀ ವಿಶ್ವ ಪ್ರಸನ್ನ ಮತ್ತು ಪೇಜಾವರ ಶ್ರೀ ವಿಶ್ವ ಪ್ರಿಯರು ಬೆಳಪು ಡಾl ದೇವಿ ಪ್ರಸಾದ್ ಶೆಟ್ಟಿ ಅವರಿಗೆ ಸಮಾಜ ರತ್ನ, ಡಾl ಗಂಗಾಧರ್ ಅವರಿಗೆ ವೈದ್ಯ ರತ್ನ, ಪಾಂಗಳ ನಾಗೇಶ್ ರಾವ್ ಅವರಿಗೆ ನಳ ಪಾಕಜ್ಞ, ಬೈಲೂರು ಮುರಳೀಧರ ತಂತ್ರಿ ಅವರಿಗೆ ಜ್ಯೋತಿ ಮಾರ್ತಾಂಡ, ಕುಕ್ಕಿ ಕಟ್ಟಿ ರಾಘವೇಂದ್ರ ತಂತ್ರಿ ಅವರಿಗೆ ತಂತ್ರ ರತ್ನ, ಇರುವತ್ತೂರು ವಾಸುದೇವ ಭಟ್ ಅವರಿಗೆ ಮಂತ್ರ ಮಾರ್ತಾಂಡ, ಬಪ್ಪನಾಡು ನಾಗೇಶ್ ಅವರಿಗೆ ಸ್ವರ ಮಾರ್ತಾಂಡ, ನಂದಳಿಕೆ ವಿಠ್ಠಲ್ ಭಟ್ ಅವರಿಗೆ ಪುರೋಹಿತರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅದಾನಿ ಸಂಸ್ಥೆಯ ಮುಖ್ಯಸ್ಥ ಕಿಶೋರ್ ಆಳ್ವ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ವಾಸುದೇವ ಸಾಲಿಯಾನ್, ಉದಯಕುಮಾರ್ ಶೆಟ್ಟಿ ಯುವ ಮೆರಿಡಿಯನ್ ಕುಂದಾಪುರ, ಜಯಶೀಲ ಶೆಟ್ಟಿ ಕುಂದಾಪುರ, ಆನಂದ ಸಿ ಕುಂದರ್, ವೆಂಕಟ್ರಮಣ ಅಸ್ರಣ್ಣ, ಶ್ರೀಪತಿ ಭಟ್ ಶಾಂತ ಎಲೆಕ್ಟ್ರಿಕಲ್ಸ್ ಉಡುಪಿ ಮತ್ತಿತರರು ಉಪಸ್ಥಿತರಿದ್ದರು.
05 Jan 2024, 06:29 PM
Category: Kaup
Tags: