ಶಿರ್ವ : ಪಾಂಬೂರಿನ ಮಾನಸ ವಸತಿ ಶಾಲೆಯಲ್ಲಿ 69ನೇ ಹುಟ್ಟು ಹಬ್ಬ ಆಚರಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ
ಶಿರ್ವ : ಪ್ರೀತಿ ನೀಡುವ ಮೂಲಕ ವಿಶೇಷ ಮಕ್ಕಳನ್ನು ಸಮಾಜದ ಇತರರಂತೆ ಕಾಣಲು ಸಾಧ್ಯ. ಇಂತಹ ಮಕ್ಕಳೊಂದಿಗೆ ಹುಟ್ಟು ಹಬ್ಬದ ಆಚರಣೆ ಅವಿಸ್ಮರಣೀಯ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಕಾಪು ಬ್ಲಾಕ್ ಕಾಂಗ್ರೆಸ್ ಮಾನಸ ವಸತಿ ಶಾಲೆ ಪಾಂಬೂರಿನಲ್ಲಿ ಆಯೋಜಿಸಿದ್ದ ತಮ್ಮ 69ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ಸಂದರ್ಭ ವಿಶೇಷ ಮಕ್ಕಳಿಗಾಗಿ ಆಯೋಜಿಸಿದ್ದ ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಮಾನಸ ಸಂಸ್ಥೆಯ ಪ್ರಮುಖರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಶಿವಾಜಿ ಸುವರ್ಣ ಶಿರ್ವ, ಅಶೋಕ್ ಕೊಡವೂರು ಮತ್ತಿತರರು ಉಪಸ್ಥಿತರಿದ್ದರು.
