ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ - ನಮಾಮಿ ರಾಮ ಭಜಕಮ್ ; ಕರಸೇವಕರಿಗೆ ಗೌರವಾರ್ಪಣೆ
ಕಟಪಾಡಿ : ನಮಾಮಿ ರಾಮ ಭಜಕಮ್ ಕಾರ್ಯಕ್ರಮದಡಿ ಕರ್ನಾಟಕ ಅಖಿಲ ಭಾರತೀಯ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ, ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ವತಿಯಿಂದ ಕಾಪು ತಾಲೂಕಿನ ಅಯೋಧ್ಯೆ ರಾಮ ಮಂದಿರದ ಕರಸೇವೆಯಲ್ಲಿ ಭಾಗಿಯಾದ ಕರಸೇವಕರನ್ನು ಗೌರವಿಸಿದರು.
ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರು
ನಾರಾಯಣ ಕಾಮತ್, ಕೋಡುಗುಡ್ಡೆ, ಶ್ರೀಧರ ಶೆಟ್ಟಿ ಕೋಡು, ಸುಂದರ ಪ್ರಭು ಶಿರ್ವ , ಶ್ರೀಪತಿ ಕಾಮತ್ ಶಿರ್ವ, ದಿನೇಶ್ ಪಾಟ್ಕರ್ ಮಟ್ಟಾರು, ರಮೇಶ್ ಪ್ರಭು ಬೆಳಂಜಾಲೆಗೆ ತೆರಳಿ ಕರಸೇವಕರಿಗೆ ಅಭಿವಂದಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಬಿಜೆಪಿ ಮಹಿಳಾ ಮೋರ್ಚಾ ಉಡುಪಿ ಜಿಲ್ಲೆ ಅಧ್ಯಕ್ಷೆ ವೀಣಾ ಶೆಟ್ಟಿ, ವಿಶ್ವ ಹಿಂದೂ ಪರಿಷದ್ ಕಾಪು ತಾಲೂಕು ಸಂಘದ ಅಧ್ಯಕ್ಷ ಜಯಪ್ರಕಾಶ್ ಪ್ರಭು, ಸಂಘದ ಸ್ವಯಂ ಸೇವಕ ಸುಬ್ರಹ್ಮಣ್ಯ ವಾಗ್ಳೆ, ಶಿರ್ವ ವ್ಯವಸಾಯಿಕ ಸೇವಾ ಸಹಕಾರಿ ನಿ. ಉಪಾಧ್ಯಕ್ಷೆ ವಾರಿಜ ಪೂಜಾರಿ, ವಿಶ್ವ ಹಿಂದೂ ಪರಿಷದ್ ಮಟ್ಟಾರು ಅಧ್ಯಕ್ಷ ಜಗದೀಶ ಆಚಾರ್ಯ, ಕಾರ್ಯದರ್ಶಿ ಶಿವಪ್ರಸಾದ್ ನಾಯ್ಕ, ಮಾತೃ ಶಕ್ತಿ ಕಾಪು ತಾಲೂಕು ಸಹ ಪ್ರಮುಖ್ ಉಷಾ ಪಾಟ್ಕರ್, ಮಾತೃ ಶಕ್ತಿ ಮಟ್ಟಾರು ಪ್ರಮುಖ್ ಸುಮತಿ ಸಾಲ್ಯಾನ್, ಗ್ರಾಮ ಪಂಚಾಯತ್ ಸದಸ್ಯೆ ಮಮತಾ ಶೆಟ್ಟಿ, ವಿಜಯ ಕುಂದರ್ ಕಿದಿಯೂರು, ಮಮತ ರಾವ್, ಸತೀಶ್ ದೇವಾಡಿಗ ಕಾಪು, ನಿಲೇಶ್ ಕಿದಿಯೂರು, ಗೋಪಾಲ ಆಚಾರ್ಯ ಮಟ್ಟಾರು, ಗಿರಿಧರ ಪ್ರಭು, ಶ್ರೀಕಾಂತ ಆಚಾರ್ಯ ಉಪಸ್ಥಿತರಿದ್ದರು.
