ಬಂಟಕಲ್ಲು : ಬಸ್ಸು ನಿಲ್ದಾಣ ಗ್ರಂಥಾಲಯಕ್ಕೆ ಬನ್ನಂಜೆ ಬಾಬು ಅಮೀನ್ ರವರ ಅಕ್ಷರ ತುಲಾಭಾರದ ಪುಸ್ತಕಗಳ ಕೊಡುಗೆ
Thumbnail
ಬಂಟಕಲ್ಲು : ಇಲ್ಲಿನ ನಾಗರಿಕ ಸೇವಾ ಸಮಿತಿ (ರಿ.) ಇವರು ಜಿಲ್ಲೆಯಲ್ಲೇ ಪ್ರಥಮವಾಗಿ ಬಂಟಕಲ್ಲು ಬಸ್ಸು ನಿಲ್ದಾಣದಲ್ಲಿ ಪ್ರಾಯೋಜಿಸಿರುವ ಬಸ್ಸು ನಿಲ್ದಾಣ ಗ್ರಂಥಾಲಯಕ್ಕೆ ಬನ್ನಂಜೆ ಬಾಬು ಅಮೀನ್ ರವರ ಅಕ್ಷರ ತುಲಾಭಾರದ ಆಯ್ದ ಸುಮಾರು ರೂ. 2,500 ಬೆಲೆಯ ಕೆಲವು ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಇತ್ತೀಚೆಗೆ ಬನ್ನಂಜೆ ನಾರಾಯಣಗುರು ಸಭಾಗೃಹದಲ್ಲಿ ನಡೆದ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ರವರ 80 ರ ಸಂಭ್ರಮದ ಸಿರಿತುಪ್ಪೆ ಕಾರ್ಯಕ್ರಮ ನಡೆದಿತ್ತು. ಈ ಸಂಧರ್ಭದಲ್ಲಿ ಅವರನ್ನು ಪುಸ್ತಕಳಿಂದ ತುಲಾಭಾರ ನಡೆಸಲಾಗಿತ್ತು. ಈ ಅಕ್ಷರ ತುಲಾಭಾರದ ಬಾಬು ಅಮೀನ್ ರವರೇ ಬರೆದ ಪುಸ್ತಕಗಳ ಸಹಿತ ಕೆಲವು ಪುಸ್ತಕಗಳನ್ನು ಅಭಿನಂದನಾ ಸಮಿತಿಯ ಅರವಿಂದ ಕಲ್ಲುಗುಡ್ಡೆಯವರು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆ ಆರ್ ಪಾಟ್ಕರ್ ರವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಶಿರ್ವ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಬಂಟಕಲ್ಲು, ನಾಗರಿಕ ಸೇವಾ ಸಮಿತಿಯ ಅನಂತರಾಮ ವಾಗ್ಲೆ, ವಿನ್ಸಂಟ್ ಕಸ್ತಲಿನೊ, ವಿರೇಂದ್ರ ಪಾಟ್ಕರ್, ಉದ್ಯಮಿ ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.
Additional image
07 Jan 2024, 03:12 PM
Category: Kaup
Tags: