ಜನವರಿ 21 : ದೇವರ ಚಿತ್ರ ಬಿಡಿಸುವ ಸ್ಪರ್ಧೆ
ಪಡುಬಿದ್ರಿ : ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಮಂದಿರ ಉದ್ಘಾಟನೆ ಮತ್ತು ಶ್ರೀ ರಾಮನ ವಿಗ್ರಹದ ಪ್ರತಿಷ್ಠಾಪನೆಯ ನಿಮಿತ್ತ ದಿ| ಉಗ್ಗು ದೇವಿ ನಾರಾಯಣ ಇವರ ಮಕ್ಕಳು ಮತ್ತು ಗೆಳೆಯರ ಬಳಗ, ಮುಂಬಯಿ ಇವರ ಜಂಟಿ ಆಶ್ರಯದಲ್ಲಿ ಜನವರಿ 21, ಆದಿತ್ಯವಾರ ಬೆಳಿಗ್ಗೆ ಗಂಟೆ 10ರಿಂದ ಪಡುಬಿದ್ರಿ ಬೀಚ್ ರೋಡ್ ನಲ್ಲಿರುವ ಸಾಗರ ವಿದ್ಯಾಮಂದಿರ ಸಭಾಗೃಹದಲ್ಲಿ ದೇವರ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಮಲ್ಪೆಯಿಂದ ಹೆಜಮಾಡಿ ವರೆಗಿನ ಮೊಗವೀರರು ಮತ್ತು ಸಾಗರ ವಿದ್ಯಾ ಮಂದಿರದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಬಹುದು. 5ರಿಂದ 10, 11ರಿಂದ 15, 16ರಿಂದ ಮೇಲ್ಪಟ್ಟ ವಯಸ್ಸಿನವರಿಗೆ ಭಾಗವಹಿಸುವ ಅವಕಾಶವಿದೆ.
ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಭಾಗವಹಿಸುವವರು ಬರುವಾಗ ವಿಳಾಸದ ದಾಖಲೆ ಮತ್ತು ವಯಸ್ಸಿನ ದಾಖಲೆ ತರಬೇಕೆಂದು ವಿನಂತಿಸಿದ್ದಾರೆ. ಡ್ರಾಯಿಂಗ್ ಪೇಪರ್ ಸ್ಥಳದಲ್ಲಿ ನೀಡಲಾಗುವುದು. ಉಳಿದಂತೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳನ್ನು ಸ್ಪರ್ಧಾರ್ಥಿಗಳೇ ತರಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
96995 36571
7022194379
