ಮುಂಬೈನ ವಸಾಯಿ ಕ್ಷೇತ್ರದ ಶಾಸಕ ಹಿತೇಂದ್ರ ಠಾಕೂರ್ : ಕಾಪು ಮಾರಿಯಮ್ಮ ದೇವಸ್ಥಾನ ಭೇಟಿ
ಕಾಪು : ಮುಂಬೈನ ವಸಾಯಿ ಕ್ಷೇತ್ರದ ಶಾಸಕರಾದ ಹಿತೇಂದ್ರ ಠಾಕೂರ್ ಮತ್ತು ಪತ್ನಿ ವಸಾಯಿ ತಾಲೂಕು ಇದರ ಮಾಜಿ ಮೇಯರ್ ಪ್ರವೀಣಾ ಠಾಕೂರ್ ಅವರು ಕಾಪು ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರದ ಮುಂಬೈ ಸಮಿತಿಯ ಗೌರವ ಸಲಹೆಗಾರರಾದ ವಿರಾರ್ ಶಂಕರ್ ಬಿ. ಶೆಟ್ಟಿ, ಬಳ್ಕುಂಜೆ ಅವರೊಂದಿಗೆ ಶುಕ್ರವಾರ ದೇಗುಲಕ್ಕೆ ಆಗಮಿಸಿ ಶ್ರೀ ದೇವಿಯ ದರುಶನ ಪಡೆದು, ಭರದಿಂದ ಸಾಗುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದರು.
ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರು ಸನ್ನಿಧಾನದಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಿದರು.
ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು ಇಂತಹ ಅದ್ಭುತ ಕೆಲಸ ನಿಜವಾಗಿಯೂ ಮನಸೊರೆಗೊಂಡಿತು, ಮುಂದೆ ನಡೆಯಲಿರುವ ಬ್ರಹ್ಮಕಳಶೋತ್ಸವದ ಸಂದರ್ಭದಲ್ಲಿಯೂ ಭೇಟಿ ನೀಡಿ ಅಮ್ಮನ ದರುಶನ ಪಡೆಯಲು ಕಾತುರದಿಂದ ಇದ್ದೇವೆ ಎಂದು ಹೇಳಿದರು.
ಈ ಸಂದರ್ಭ ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರಾದ ರತ್ನಾಕರ ಹೆಗ್ಡೆ ಕಲ್ಯಾ, ಹರೀಶ್ ಶೆಟ್ಟಿ ಗುರ್ಮೆ, ರಮನಾಥ್ ಶೆಟ್ಟಿ (ಪಪ್ಪಣ್ಣ), ನಕುಲನ್, ರಮೇಶ್ ಕೋಟಿ, ಕವಿತಾ ಕೋಟಿ ಹಾಗೂ ದೇವಳದ ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಉಪಸ್ಥಿತರಿದ್ದರು.
