ಉಡುಪಿ : ಅಖಿಲಕರ್ನಾಟಕ ಬ್ರಾಹ್ಮಣ ಅರ್ಚಕ, ಪುರೋಹಿತರು ಉಡುಪಿ ಘಟಕದಿಂದ ಶ್ರೀರಾಮತಾರಕ ಮಹಾಯಾಗ
Thumbnail
ಉಡುಪಿ : ಅಯೋಧ್ಯೆ ಶ್ರೀರಾಮದೇವರ ಪ್ರತಿಷ್ಠಾಪನಾ ಅಂಗವಾಗಿ ಹಾಗೂ ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಲೋಕಕಲ್ಯಾಣಕ್ಕಾಗಿ ಅಖಿಲಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರು ಉಡುಪಿ ಘಟಕ ಇವರ ನೇತೃತ್ವದಲ್ಲಿ ಉಡುಪಿ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ 13 ಕುಂಡಗಳಲ್ಲಿ ಲಕ್ಷ ಸಂಖ್ಯೆಯಲ್ಲಿ ಶ್ರೀರಾಮತಾರಕ ಮಹಾಯಾಗವು ಸಂಪನ್ನಗೊಂಡಿತು. ನಂತರ ರಥಬೀದಿಯಲ್ಲಿ ಶ್ರೀರಾಮನ ಮೆರವಣಿಗೆ ನಡೆಯಿತು. ಶ್ರೀರಾಮದೇವರ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಖಿಲಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರು ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಚೆನ್ನಕೇಶವಗಾಯತ್ರಿಭಟ್, ಉಪಾಧ್ಯಕ್ಷರಾದ ಮನೋಹರತಂತ್ರಿಗಳು, ಉಡುಪಿ ತಾಲೂಕು ಅಧ್ಯಕ್ಷರಾದ ವಿಖ್ಯಾತ ಭಟ್, ಪದಾಧಿಕಾರಿಗಳಾದ ಸುದರ್ಶನ ಕಡಂಬಳಿತ್ತಾಯ, ಭಾನುಚಂದ್ರ ಐತಾಳ್, ರಾಘವೇಂದ್ರ ಭಟ್ ಗುಡ್ಡೆಯಂಗಡಿ, ದೇವಸ್ಥಾನದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ ಇನ್ನಾ, ಬ್ರಾಹ್ಮಣ ಸಂಘಟನೆಯವರು, ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.
Additional image
20 Jan 2024, 05:53 PM
Category: Kaup
Tags: