ಕರ್ನಾಟಕದಲ್ಲಿ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ : ಶ್ರೀ ಸಾಯಿ ಈಶ್ವರ್ ಗುರೂಜಿ ಕರೆ
Thumbnail
ಶ್ರೀರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ಮಾತ್ರ ಅಲ್ಲ. ಇದು ಭಾರತ ದೇಶದ ಪ್ರಾಣ ಪ್ರತಿಷ್ಠೆ. ಈ ದಿನವನ್ನು ಭಾರತದ ಪ್ರತಿಯೊಬ್ಬ ಪ್ರಜೆಯು ಗೌರವಿಸಬೇಕಾದ ದಿನ ಈಗಾಗಲೇ ಕರ್ನಾಟಕದ ರಾಜ್ಯ ಸರಕಾರಕ್ಕೆಜನವರಿ 22ರಂದು ಸಾರ್ವತ್ರಿಕ ರಜೆಯನ್ನು ನೀಡಬೇಕಾಗಿ ವಿನಂತಿ ಮಾಡಿದರೂ, ದ್ವೇಷದ ರಾಜಕಾರಣ ಮಾಡುತ್ತಿದ್ದು ರಾಮನ ಶಕ್ತಿ, ಭಕ್ತಿಯ ಬಗ್ಗೆ ತಿಳಿದಿದ್ದರೂ ಹಿಂದುಗಳ ಭಾವನೆಗೆ ಬೆಲೆ ನೀಡದಿರುವುದು ವಿಪರ್ಯಾಸ. ಒಂದು ದಿನ ಶಾಲೆಗೆ ಹೋಗದಿದ್ದರೆ ಏನು ಆಗುವುದಿಲ್ಲ. ಮಕ್ಕಳನ್ನು ನಿಮ್ಮ ಆಸು ಪಾಸಿನಲ್ಲಿರುವ ದೇವಸ್ಥಾನ ಹಾಗೂ ಸಂಘ-ಸಂಸ್ಥೆಗಳಲ್ಲಿ ನಡೆಯುವ ರಾಮೋತ್ಸವಕ್ಕೆ ಕಳುಹಿಸಿ ಎಂದು ಮನವಿ ಮಾಡಿದ್ದಾರೆ.
21 Jan 2024, 03:45 PM
Category: Kaup
Tags: