ಕಾಪು : ಇನ್ನಂಜೆಯಲ್ಲಿ ಪಿ.ಎಂ. ವಿಶ್ವಕರ್ಮ ಯೋಜನೆಯ ನೋಂದಣಿ ಅಭಿಯಾನಕ್ಕೆ ಚಾಲನೆ
ಕಾಪು : ಪಿ.ಎಂ. ವಿಶ್ವಕರ್ಮ ಯೋಜನೆಯ ನೋಂದಣಿ ಅಭಿಯಾನವು ಇನ್ನಂಜೆ ಗ್ರಾ. ಪಂ. ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅಭಿಯಾನ ಉದ್ಘಾಟಿಸಿದ ಇನ್ನಂಜೆ ಗ್ರಾ. ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ ಮಾತನಾಡಿ, ಪಿ. ಎಂ. ವಿಶ್ವಕರ್ಮ ಯೋಜನೆಯಡಿ ಸಾಂಪ್ರದಾಯಿಕ ಕೆಲಸ ಮಾಡುವ ಅರ್ಹರೆಲ್ಲರೂ ನೋಂದಾವಣೆ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು. ತಾವು ಮಾಡುವ ಉದ್ಯಮ ಅಭಿವೃದ್ಧಿ ಪಡಿಸಲು ಬ್ಯಾಂಕಿನಲ್ಲಿಶೇ. 5 ಬಡ್ಡಿದರದಲ್ಲಿ ಸಾಲ ಸೌಲಭ್ಯ, ತಮ್ಮ ವೃತ್ತಿಯ ಉಪಕರಣ ಖರೀದಿಸಲು ಸಹಾಯಧನ, 5 ದಿನಗಳ ತರಬೇತಿಗೆ 500ರೂ. ಸಹಾಯಧನ ಸಿಗುತ್ತಿದ್ದು ಗ್ರಾಮಸ್ಥರು ಯೋಜನೆಯ ಉಪಯೋಗ ಪಡೆದು ಆರ್ಥಿಕ ಸಬಲೀಕರಣ ಯೋಜನೆಯ ಮೂಲ ಉದ್ದೇಶವಾಗಿದೆ ಎಂದರು.
ಇನ್ನಂಜೆ ಗ್ರಾ.ಪಂ. ಉಪಾಧ್ಯಕ್ಷೆ ಸುರೇಖ ಶೆಟ್ಟಿ, ಮಾಧ್ಯಮ ವರದಿಗಾರ ವಿಕ್ಕಿ ಪೂಜಾರಿ, ಬ್ಯಾಂಕ್ ಆಫ್ ಬರೋಡ ಇನ್ನಂಜೆ ಶಾಖೆಯ ಮೆನೇಜರ್ ನೇಹಾ ಮೆಂಡೋನ್ಸ, ರಾಜೇಶ್ವರಿ ಸ್ವಸಹಾಯ ಒಕ್ಕೂಟದ ಅಧ್ಯಕ್ಷೆ ಸುಗುಣ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ಅಶ್ಮಿತಾ, ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ಪಂಚಾಯತ್ ಸಿಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ಇನ್ನಂಜೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಚಂದ್ರಶೇಖರ ಸಾಲಿಯಾನ್ ಸ್ವಾಗತಿಸಿ, ನಿರೂಪಿಸಿದರು. ಪಂಚಾಯತ್ ಬಿಲ್ ಕಲೆಕ್ಟರ್ ಹರೀಶ್ ವಂದಿಸಿದರು.
