ಶಿವಾಯ ಫೌಂಡೇಶನ್ ಮುಂಬಯಿ : ಸ್ಪಂದನ ಬೌದ್ಧಿಕ ದಿವ್ಯಾಂಗರ ವಸತಿ ಕೇಂದ್ರ ಭೇಟಿ
Thumbnail
ಉಡುಪಿ : ಶಿವಾಯ ಫೌಂಡೇಶನ್ (ರಿ.) ಮುಂಬಯಿ ವತಿಯಿಂದ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಗವಾನ್ ಶ್ರೀ ರಾಮನ ಪ್ರತಿಷ್ಠಾಪನೆ ಅಂಗವಾಗಿ ಉಪ್ಪೂರಿನ ಸ್ಪಂದನ ಬೌದ್ಧಿಕ ದಿವ್ಯಾಂಗರ ವಸತಿ ಕೇಂದ್ರದ ವಿದ್ಯಾರ್ಥಿಗಳಿಗೆ ಅನ್ನದಾನ ದ ಸೇವೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಅಧ್ಯಕ್ಷರಾದ ‌ಸಂತೋಷ್ ಪಡುಬಿದ್ರಿ, ಪೂರ್ವ ಸಹಾಯಕ ಗರ್ವನರ್ ಗಣೇಶ್ ‌ಅಚಾರ್ಯ ಉಚ್ಚಿಲ, ಶಿವಾನಿ ಫೌಂಡೇಶನ್ ಸಂಸ್ಥೆ ಸದಸ್ಯರಾದ ರವಿ ಶೆಟ್ಟಿ ಶಾರದೆ, ಜಗನ್ನಾಥ ಶೆಟ್ಟಿ ಪಾದೆಬೆಟ್ಟು, ಪ್ರಜ್ವಲ್ ಶೆಟ್ಟಿ, ಸಂಸ್ಥೆಯ ಹಿತೈಷಿಗಳಾದ ಸುಧಾಕರ್ ಕೆ., ಸಂತೋಷ್ ನಂಬಿಯಾರ್, ನವೀನ್ ಪೂಜಾರಿ, ಸ್ಪಂದನ ಸಂಸ್ಥೆ ಸಂಚಾಲಕ ಜರ್ನಾಧನ್ ಎನ್. ಉಪಸ್ಥಿತರಿದ್ದರು.
Additional image
22 Jan 2024, 09:51 PM
Category: Kaup
Tags: