ಜ.24-25: ಸಾಸ್ತಾನ ಶ್ರೀ ನಾಲ್ಕು ಪಾದ ಹ್ಯಾಗೂಳಿ, ಕೋಳೆರಾಯ, ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ಗೆಂಡೆ ಸೇವೆ, ಕೋಲಸೇವೆ
Thumbnail
ಸಾಸ್ತಾನ : ಉಡುಪಿ ಜಿಲ್ಲೆಯ ಸಾಸ್ತಾನ ಕೋಡಿತಲೆಯ ಶ್ರೀ ನಾಲ್ಕುಪಾದ ಹ್ಯಾಗೂಳಿ ಹಾಗೂ ಕೋಳೆರಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ಜಾತ್ರೆಯ ಗೆಂಡ ಸೇವೆ ಹಾಗೂ ಕೋಲವು ಜ. 24 ಮತ್ತು ಜ. 25 ರಂದು ನಡೆಯಲಿದೆ. ಜ.23 ರಿಂದ ಪಂಚ ವಿಂಶತಿ ಕಲಶ ಸ್ಥಾಪನೆ, ಅಧಿವಾಸ ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಂಡು ಜ.24 ರಂದು ರಾತ್ರಿ 8 ಗಂಟೆಗೆ ‘ಗೆಂಡಸೇವೆ’ ಮತ್ತು ಸೇವಾ ಕರ್ತರಿಂದ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ಮತ್ತು ಕೋಲ ಸೇವೆ ನಡೆಯಲಿದೆ. ಜ.25 ರಂದು ಮಧ್ಯಾಹ್ನ ಹರಕೆಯ ರೂಪದಲ್ಲಿ ‘ತುಲಾಭಾರ ಸೇವೆ’ ಹಾಗೂ ದೇವಸ್ಥಾನದ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದೆ. ಜ.21ರಂದು ಹ್ಯಾಗೂಳಿ, ಪಂಜುರ್ಲಿ ದೈವಗಳಿಗೆ ಸಮರ್ಪಣೆ ಮಾಡಲಿರುವ ಚಿನ್ನದ ಮುಖವಾಡದ ಮೆರವಣಿಗೆ ಜರಗಿತ್ತು.
Additional image Additional image
23 Jan 2024, 06:24 PM
Category: Kaup
Tags: