ಬಂಟಕಲ್ಲು : ಸನ್ ಶೈನ್ ಸೀನಿಯರ್ ಚೇಂಬರ್ ಉದ್ಘಾಟನೆ
ಬಂಟಕಲ್ಲು : ಸೀನಿಯರ್ ಚೇಂಬರ್ ಉಡುಪಿ ಟೆಂಪಲ್ ಸಿಟಿ ಲೀಜನ್ ನಿಂದ ಪ್ರವರ್ತಿಸಲ್ಪಟ್ಟ ಬಂಟಕಲ್ ಸನ್ ಶೈನ್ ಸೀನಿಯರ್ ಚೇಂಬರ್ ನ್ನು ಸೀನಿಯರ್ ಚೇಂಬರ್ ನ ರಾಷ್ಟ್ರೀಯ ಅಧ್ಯಕ್ಷರಾದ ಸೀನಿಯರ್ ವರ್ಗಿಸ್ ವೈದನ್ ರವರು ಉದ್ಘಾಟಿಸಿದರು.
ಸ್ಥಾಪಕ ಅಧ್ಯಕ್ಷರಾಗಿ ಸಂದೀಪ್ ಬಂಗೇರ, ಸ್ಥಾಪಕ ಕಾರ್ಯದರ್ಶಿಯಾಗಿ ರಮೇಶ್ ಬಂಟಕಲ್, ಸ್ಥಾಪಕ ಕೋಶಾಧಿಕಾರಿಯಾಗಿ ವಿಗ್ನೇಶ್ ಶೆಟ್ಟಿ ಮತ್ತು 20 ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.
ಉಡುಪಿ ಟೆಂಪಲ್ ಸಿಟಿಯ ಅಧ್ಯಕ್ಷರಾದ ಸೀನಿಯರ್ ಆಲ್ವಿನ್ ಮೆನೆಜಸ್, ರಾಷ್ಟ್ರೀಯ ಉಪಾಧ್ಯಕ್ಷರಾದ ಸೀನಿಯರ್ ನವೀನ್ ಅಮೀನ್, ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಸೀನಿಯರ್ ಚಿತ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
