ಕಾಪು : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕಲ್ಲುಗುಡ್ಡೆಯ ಕಾಲಾವಧಿ ನೇಮೋತ್ಸವ
Thumbnail
ಕಾಪು : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕಲ್ಲುಗುಡ್ಡೆಯ ಕಾಲಾವಧಿ ನೇಮೋತ್ಸವವು ಜನವರಿ 28ರಿಂದ 30ರವರೆಗೆ ನಡೆಯಲಿದೆ. ಜನವರಿ‌‌ 28, ಆದಿತ್ಯವಾರದಂದು ಹಸಿರುವಾಣಿಯೊಂದಿಗೆ ಗರಡಿ ಪ್ರವೇಶ. 29, ಸೋಮವಾರ ರಾತ್ರಿ ನೈವೇದ್ಯದ ಅಗಲು ಸೇವೆ. 30, ಮಂಗಳವಾರ ಮಧ್ಯಾಹ್ನ 12:30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 7ರಿಂದ ಬೈದರ್ಕಳ ನೇಮೋತ್ಸವ, ರಾತ್ರಿ 8ರಿಂದ 10ರ ತನಕ ಅನ್ನಸಂತರ್ಪಣೆ, ಬೆಳಗ್ಗೆ 3 ಗಂಟೆಗೆ ಮಾಯಂದಾಲ ದೇವಿಯ ನೇಮ ನಡೆಯಲಿದೆ. 31, ಬುಧವಾರ ರಾತ್ರಿ ಶುದ್ಧದ ಅಗಲು ಸೇವೆ ನಡೆಯಲಿದೆ ಎಂದು ‌ಪ್ರಕಟನೆಯಲ್ಲಿ‌ ತಿಳಿಸಿದ್ದಾರೆ.
28 Jan 2024, 06:31 PM
Category: Kaup
Tags: