ಶಿರ್ವ : ಮೂಡುಮಟ್ಟಾರು ಶ್ರೀ ಬಬ್ಬರ್ಯ ದೈವಸ್ಥಾನ - ಜೀರ್ಣೋದ್ಧಾರದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಗಳು ಸಂಪನ್ನ
Thumbnail
ಶಿರ್ವ : ಮೂಡುಮಟ್ಟಾರು ಶ್ರೀ ಬಬ್ಬರ್ಯ ದೈವಸ್ಥಾನ ಇದರ ಅಮೂಲಾಗ್ರಹ ಜೀರ್ಣೋದ್ಧಾರದ ಪ್ರಯುಕ್ತ ಸಾನ್ನಿಧ್ಯ ಸಂಕೋಚ ಬಾಲಾಲಯ ಪ್ರತಿಷ್ಠೆ ವಿಧಿ ವಿಧಾನವು ಆಗಮ ಪಂಡಿತರಾದ ಕೇಂಜ ಶ್ರೀಧರ ತಂತ್ರಿಗಳ ಮಾರ್ಗದರ್ಶನದಲ್ಲಿ, ಕ್ಷೇತ್ರ ಪುರೋಹಿತರು ರಘುಪತಿ ಗುಂಡು ಭಟ್ ಇವರ ನೇತೃತ್ವದಲ್ಲಿ ಸಂಪನ್ನಗೊಂಡಿತು. ಸಮಾರಂಭದಲ್ಲಿ ನಡಿಬೆಟ್ಟು ಮನೆತನದ ರತ್ನವರ್ಮ ಹೆಗ್ಡೆ, ಕಾರ್ಯಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಉಪಾಧ್ಯಕ್ಷರಾದ ಎಸ್. ಕೆ ಸಾಲ್ಯಾನ್. ,ಜಗದೀಶ್ ಶೆಟ್ಟಿ, ವಾದಿರಾಜ ಆಚಾರ್ಯ, ವಿಠ್ಠಲ ಪೂಜಾರಿ, ಗೌರವ ಸಲಹೆಗಾರರಾದ ಶಂಕರ್ ಶೆಟ್ಟಿ ದರ್ಮೆಟ್ಟು, ವಿವೇಕ್ ಆಚಾರ್ಯ, ಹರಿಶ್ಚಂದ್ರ ಶೆಟ್ಟಿ, ಸಂತೋಷ ಆಚಾರ್ಯ, ಸುಧಾಕರ್ ಶೆಟ್ಟಿ, ರಾಜು ಬಿ ಸುವರ್ಣ, ಪ್ರಶಾಂತ್ ಪೂಜಾರಿ, ಕಾರ್ಯದರ್ಶಿ ಹರೀಶ್ ಪೂಜಾರಿ, ಜೊತೆ ಕಾರ್ಯದರ್ಶಿ ರವಿ ಪೂಜಾರಿ, ಕೋಶಾಧಿಕಾರಿ ಮಂಜುನಾಥ್ ಆಚಾರ್ಯ, ಸಂದೀಪ್ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಬಳಗ, ಸ್ಥಳವಂದಿಗರು ಮೂಡು ಮಟ್ಟಾರು ಗ್ರಾಮಸ್ಥರು ಉಪಸ್ಥಿತರಿದ್ದರು.
30 Jan 2024, 06:35 PM
Category: Kaup
Tags: