ಪಡುಬಿದ್ರಿ : ಆನ್‌ಲೈನ್‌ ಜಾಬ್‌ ವಂಚನೆ
Thumbnail
ಪಡುಬಿದ್ರಿ : ಫೇಸ್‌ಬುಕ್‌ ನಲ್ಲಿ ಕಂಡ ಆನ್‌ಲೈನ್‌ ಜಾಬ್‌ ಜಾಹೀರಾತಿಗೆ ಮರುಳಾಗಿ ಮಹಿಳೆಯೋರ್ವರು 3 ಲಕ್ಷ 83 ಸಾವಿರ ರೂ. ಹಣ ಕಳೆದುಕೊಂಡು ವಂಚನೆಗೊಳಗಾದ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಬೇಬಿ ಎಂಬುವವರು ಖಾಸಗಿ ಕಂಪೆನಿಯಲ್ಲಿ ತಾಂತ್ರಿಕ ಸಹಾಯಕಳಾಗಿ ವರ್ಕ್‌ ಪ್ರಮ್‌ ಹೋಮ್‌ ಕೆಲಸ ಮಾಡಿಕೊಂಡಿದ್ದು ಪೇಸ್‌ಬುಕ್‌ ನೋಡುತ್ತಿದ್ದಾಗ ಆನ್‌ಲೈನ್‌ ಜಾಬ್‌ ಬಗೆಗಿನ ಜಾಹೀರಾತಿಗೆ ಕುತೂಹಲಗೊಂಡು ವಾಟ್ಸಾಪ್ ಸಂಖ್ಯೆ ಮೂಲಕ ಸಂಪರ್ಕಿಸಿ ತದನಂತರ ಆರೋಪಿತರು ಟೆಲಿಗ್ರಾಂ ಖಾತೆ ಮುಖೇನ ಟಾಸ್ಕ್‌ ನೀಡಲು ಪ್ರಾರಂಭಿಸಿದ್ದು, ಪ್ರಿಪೈಡ್‌ ಟಾಸ್ಕ್‌ ಎಂಬುದಾಗಿ ತಿಳಿಸಿದಂತೆ ಬೇಬಿಯವರಿಂದ ಹಂತ ಹಂತವಾಗಿ ಗೂಗಲ್ ಪೇ ಮುಖೇನ ಒಟ್ಟು ರೂ.3,83,000/- ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಹಣವನ್ನು ವಾಪಾಸ್ಸು ನೀಡದೇ ಮೋಸ ಮಾಡಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
31 Jan 2024, 10:11 PM
Category: Kaup
Tags: