ಕಾಪು : ಗ್ರಾಮ ಚಲೋ ಕಾರ್ಯಕ್ರಮ - ಪೂರ್ವಭಾವಿ ಸಭೆ
ಕಾಪು : ಫೆಬ್ರವರಿ 9,10 ಮತ್ತು 11 ರಂದು ನಡೆಯಲಿರುವ ಕಾಪು ಗ್ರಾಮ ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆ ಇಂದು ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶಿಲ್ಪಾ ಜಿ ಸುವರ್ಣ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಚಾಲಕರಾದ ಕುತ್ಯಾರು ನವೀನ್ ಶೆಟ್ಟಿ, ಗ್ರಾಮ ಚಲೋ ಕಾರ್ಯಕ್ರಮದ ಜಿಲ್ಲಾ ಸಹ ಸಂಚಾಲಕರಾದ ವಿಜಯ್ ಕುಮಾರ್, ಕಾಪು ಮಂಡಲ ಸಂಚಾಲಕರಾದ ಮುರಳಿಧರ ಪೈ, ಸಹ ಸಂಚಾಲಕರಾದ ನವೀನ್ ಎಸ್.ಕೆ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
