ಕಾಪು : ಮಾನ್ಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರತಿಷ್ಠಾನ - ಸಂಸ್ಕೃತಿ ಸಂಚಯನದಲ್ಲಿ ಅನಿವಾಸಿಗರು ಚಿಂತನ ಮಂಥನ
Thumbnail
ಕಾಪು : ಮಾನ್ಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರತಿಷ್ಠಾನ ವತಿಯಿಂದ ಭಾರತೀಯ ಪ್ರವಾಸಿ ದಿನದ ಪ್ರಯುಕ್ತ ಸಂಸ್ಕೃತಿ ಸಂಚಯನದಲ್ಲಿ ಅನಿವಾಸಿಗರು ಎಂಬ ಶೀರ್ಷಿಕೆಯಡಿ ಚಿಂತನ ಮಂಥನ ಕಾರ್ಯಕ್ರಮ ಕಾಪುವಿನಲ್ಲಿ ಜರಗಿತು. ಕಾರ್ಯಕ್ರಮವನ್ನು ರಾಜಕೀಯ, ಸಾಮಾಜಿಕ ಮುಂದಾಳು ಗೀತಾಂಜಲಿ ಸುವರ್ಣ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕರಾವಳಿ ಕರ್ನಾಟಕದ ಉಭಯ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯ ಜನರು ವಿದೇಶದಲ್ಲಿ ನೆಲೆನಿಂತು ತನ್ಮೂಲಕ ತನ್ನ ಹುಟ್ಟೂರಿಗೆ ಸೇವೆಯನ್ನು ಮಾಡುತ್ತಿದ್ದು, ಅವರಿಗೂ ಕೂಡಾ ನೆರೆಯ ಕೇರಳ ರಾಜ್ಯ ಸಹಕರಿಸುವಂತೆ ನಮ್ಮಲ್ಲಿಯು ಸಂಪೂರ್ಣ ಸಹಕಾರ ಮುಂದಿನ ದಿನಗಳಲ್ಲಿ ಸರ್ಕಾರದಿಂದ ದೂರೆಯಬೇಕು ಎಂದು ಹೇಳಿದರು. ಅನಿವಾಸಿ ಪ್ರವಾಸಿಗರ ಸಂವಾದ ಹಾಗೂ ಬೆಂಗಳೂರಿನಲ್ಲಿ ಜನವರಿ 14ರಂದು‌ ಬಿಡುಗಡೆಯಾಗಿದ್ದ ಪಿ.‌ಎಸ್‌ ರಂಗನಾಥ್‌ ಸಂಪಾದಕತ್ವದ ಅರಬ್ಬರ ನಾಡಿನಲ್ಲಿ ಕನ್ನಡಿಗರು ಎಂಬ ಪುಸ್ತಕವನ್ನು ಕರಾವಳಿಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಯಿತು. ಅನಿವಾಸಿಗನಾಗಿ ಎರಡು ದಶಕಗಳ ಕಾಲ ವಿದೇಶದ ಕೆಲ ವಿಚಾರಗಳನ್ನು ಶಿವಾನಂದ ಕೋಟ್ಯಾನ್ ಹಂಚಿಕೂಂಡರು. ಈ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದ ರಾಜ ಕಟಪಾಡಿ ಮತ್ತಿತರರು ಉಪಸ್ಥಿತರಿದ್ದರು.
07 Feb 2024, 05:02 PM
Category: Kaup
Tags: