ಕಾರ್ಕಳ : ಜೆ.ಇ.ಇ ಮೈನ್ಸ್‌ ಫಲಿತಾಂಶ ಪ್ರಕಟ - ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ
Thumbnail
ಕಾರ್ಕಳ : ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್‌ ವಿಭಾಗಕ್ಕೆ ಸೇರಬಯಸುವ ವಿದ್ಯಾರ್ಥಿಗಳಿಗೆ ನ್ಯಾಶನಲ್‌ ಟೆಸ್ಟಿಂಗ್‌ ಏಜೆನ್ಸಿ ನಡೆಸುವ ಜೆ.ಇ.ಇ ಮೈನ್ಸ್‌ ನ ಮೊದಲ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕ್ರಿಯೇಟಿವ್‌ ಕಾಲೇಜಿನ 26 ವಿದ್ಯಾರ್ಥಿಗಳು 95 ಪರ್ಸಂಟೈಲ್‌ ಗಿಂತ ಅಧಿಕ ಅಂಕಗಳಿಸಿದ್ದಾರೆ 81 ವಿದ್ಯಾರ್ಥಿಗಳು 90 ಪರ್ಸಂಟೈಲ್‌ ಗಿಂತ ಅಧಿಕ ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳಾದ ಪ್ರಣವ್‌ ಟಿ. ಎಂ 98.6313, ಯುವರಾಜ್‌ ಬಿ. ಕೆ 98.2878, ಸತೀಶಗೌಡ 97.9123, ಅನನ್ಯ ಡಿ. ಜೆ ಗೌಡ 97.7325, ಕಾರ್ತಿಕ್‌ ಎ.ಎಸ್‌ 97.4489, ಕದಂಬ ಸಿದ್ದಾಂತ್‌. ಎಸ್‌ 97.3435, ಸುಜಿತ್‌ ಡಿ.ಕೆ 97.2340 ಹಾಗೂ ಪ್ರೇಮ್‌ಸಾಗರ್‌ ಪಾಟೀಲ್‌ 97.1615 ಶೇಕಡಾ ಅಂಕ ಗಳಿಸಿದ್ದಾರೆ. ಅತ್ಯಂತ ಕಠಿಣವಾದ ಪರೀಕ್ಷೆಯಲ್ಲಿ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು, ಜೆ ಇ ಇ ಸಂಯೋಜಕರಾದ ನಂದೀಶ್‌ ಹೆಚ್‌. ಬಿ ಶ್ಲಾಘಿಸಿ ಅಭಿನಂದಿಸಿದ್ದಾರೆ.
13 Feb 2024, 06:51 PM
Category: Kaup
Tags: