ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ - ಜಿಲ್ಲಾಧಿಕಾರಿಗೆ ಮನವಿ
Thumbnail
ಉಡುಪಿ : ಪರಿಸ್ಥಿತಿಯ ಒತ್ತಡಕ್ಕೆ ಅಥವಾ ವಿವಿಧ ಕಾರಣಗಳಿಗಾಗಿ ತಪ್ಪು ಮಾಡಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಸಕಾ೯ರಿ ಜುಲ್ಮಾನೆ ಕಟ್ಟಲು ಸಾಧ್ಯವಿಲ್ಲದೆ ಜೀವನ ಪೂತಿ೯ ಜೈಲಿನಲ್ಲಿ ಯಾತನೆ ಅನುಭವಿಸುವವರು ಬಹಳಷ್ಟು ಮಂದಿ ಇದ್ದು ಇವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅನುವು ಮಾಡಬೇಕೆಂದು ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಜಿಲ್ಲಾಧಿಕಾರಿ ಡಾI ವಿದ್ಯಾ ಕುಮಾರಿಯವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಈ ಸಂದಭ೯ದಲ್ಲಿ ಡಾ.ಶಶಿಕಿರಣ್ ಶೆಟ್ಟಿ, ಉದಯ್ ನಾಯ್ಕ್, ಸುಜಯ ಶೆಟ್ಟಿ, ಸುಂದರ್ ಪೂಜಾರಿ, ರಾಘವೇಂದ್ರ ಪ್ರಭು ಕವಾ೯ಲು, ರಮೇಶ ಮುಂತಾದವರಿದ್ದರು.
13 Feb 2024, 06:53 PM
Category: Kaup
Tags: