ಕಾಪು : ನಿದ್ದೆಯಲ್ಲಿದ್ದ ವ್ಯಕ್ತಿಯನ್ನು ಸ್ಕೂಟರಿನಿಂದ ಕೆಳಗಿಳಿಸಿ ಸ್ಕೂಟರ್ ಸಮೇತ ದಾಖಲೆಗಳ ಕಳವು
Thumbnail
ಕಾಪು : ಸ್ಕೂಟರ್ ನಲ್ಲಿ ಸಂಚರಿಸುತ್ತಿರುವ ಸಂದರ್ಭ ನಿದ್ರೆ ಬಂದ ಕಾರಣ ಸ್ಕೂಟರ್ ನಿಲ್ಲಿಸಿ ಮಲಗಿದ್ದ ವ್ಯಕ್ತಿ ಎಚ್ಚರವಾದಾಗ ಸ್ಕೂಟರ್ ಸಮೇತ ತನ್ನೆಲ್ಲಾ ಸೊತ್ತುಗಳನ್ನು ಕಳೆದುಕೊಂಡು ರಸ್ತೆ ಬದಿಯಲ್ಲಿ ಮಲಗಿದ್ದ ಘಟನೆ ಭಾನುವಾರ ತಡರಾತ್ರಿ ಕಾಪು ಸಮೀಪದ ಕೊಪ್ಪಲಂಗಡಿ ಬಳಿ ನಡೆದಿದೆ. ಕಾರ್ಕಳ ಮುಡಾರು ನಿವಾಸಿ ಚೇತನ್‌ ಎಂಬುವವರು ರಾತ್ರಿ ಸುರತ್ಕಲ್‌ ಕಡೆ ತೆರಳುವ ಸಂದರ್ಭ ರಾತ್ರಿ 12 ಗಂಟೆ ಸಮಯಕ್ಕೆ ಕೊಪ್ಪಲಂಗಡಿ ಬಳಿ ತಲುಪುತ್ತಿದ್ದಂತೆ ಸ್ಕೂಟರ್‌ ಸವಾರಿ ಮಾಡಲು ಕಷ್ಟವಾಗಿದ್ದುದರಿಂದ ತನ್ನ ಸ್ಕೂಟರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಸ್ಕೂಟರಿನಲ್ಲಿ ತಲೆ ಇಟ್ಟು ಮಲಗಿದ್ದು ನಂತರ ಬೆಳಿಗ್ಗೆ 02:30 ಗಂಟೆಗೆ ಎಚ್ಚರವಾದಾಗ ಹೆಲ್ಮೆಟ್‌ ಸಮೇತ ರಸ್ತೆ ಬದಿ ಮಲಗಿದ್ದು ಅವರ ಸ್ಕೂಟರ್‌, ಮೊಬೈಲ್‌, ಪರ್ಸ್‌ ಎಲ್ಲವೂ ಕಳವಾಗಿತ್ತು. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
13 Feb 2024, 11:20 PM
Category: Kaup
Tags: