ಉಡುಪಿ : ಶ್ರೀ ಸಾಯಿ ಮುಖ್ಯ ಪ್ರಾಣ ದೇವಸ್ಥಾನ ದ್ವಾರಕಾಮಾಯಿ ಮಠ ಶ್ರೀ ಕ್ಷೇತ್ರ ಶಂಕರಪುರ - ಪುಲ್ವಾಮಾ ದಾಳಿಯಲ್ಲಿ ಮಡಿದ ವೀರ ಸೈನಿಕರಿಗೆ ನುಡಿ ನಮನ
Thumbnail
ಉಡುಪಿ : ಶ್ರೀ ಸಾಯಿ ಮುಖ್ಯ ಪ್ರಾಣ ದೇವಸ್ಥಾನ ದ್ವಾರಕಾಮಾಯಿ ಮಠ ಶ್ರೀ ಕ್ಷೇತ್ರ ಶಂಕರಪುರ ವತಿಯಿಂದ ಪುಲ್ವಾಮಾ ದಾಳಿಯ 5ನೇ ವರ್ಷಾಚರಣೆ ಅಂಗವಾಗಿ ದಾಳಿಯಲ್ಲಿ ಮಡಿದ ವೀರ ಸೈನಿಕರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ಅಜ್ಜರಕಾಡು ಯುದ್ಧ ಸ್ಮಾರಕ ಬಳಿ ಬುಧವಾರ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಶಂಕರಪುರ ಸಾಯಿ ಮುಖ್ಯಪ್ರಾಣ ದೇವಾಲಯದ ಶ್ರೀ ಸಾಯಿ ಈಶ್ವರ ಗುರೂಜಿ ಮಾತನಾಡಿ ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆ ಮಾಡುವುದು ಸರಿಯಲ್ಲ. ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪುಲ್ವಾಮಾ ದಾಳಿಯಲ್ಲಿ ವೀರ ಮರಣವನ್ನು ಅಪ್ಪಿದ 40 ಜನ ವೀರ ಸೈನಿಕರಿಗೆ ನುಡಿ ನಮನ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಿ.ಆರ್.ಪಿ.ಎಫ್ ಹವಾಲ್ದಾರ್ ಮುರಳಿದರ್ .ಕೆ, ಸಿ.ಆರ್.ಪಿ.ಎಫ್ ಎ.ಎಸ್.ಐ ಕೇಶವ ಆಚಾರ್ಯ, ಉಡುಪಿ ಜಿಲ್ಲಾ ಹಿಂದೂ ಮಹಾಸಭಾ ಅಧ್ಯಕ್ಷರು ಸಂತೋಷ್ ಉದ್ಯಾವರ, ರಾಘವೇಂದ್ರ ಭಕ್ತ, ಸುಧಾಕರ್ ಶೆಟ್ಟಿ, ರಾಘವೇಂದ್ರ ಪ್ರಭು ಕವಾ೯ಲು, ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ವೀಣಾ.ಎಸ್. ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಜಗದೀಶ್ ಶೆಟ್ಟಿ, ಉದಯ ನಾಯ್ಕ್, ವಿಜಯ ಕುಂದರ್, ವಾರಿಜ ಕಲ್ಮಾಡಿ, ಸತೀಶ್, ವಿಘ್ನೇಶ್, ಪ್ರದೀಪ್, ನೀಲೇಶ್, ಅಜಯ್, ಸುದರ್ಶನ್, ಸುಪ್ರೀತಾ, ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸಿ.ಆರ್.ಪಿ.ಎಫ್ ಹವಾಲ್ದಾರ್ ಮುರಳಿದರ್ .ಕೆ, ಸಿ.ಆರ್.ಪಿ.ಎಫ್ ಎ.ಎಸ್.ಐ ಕೇಶವ ಆಚಾರ್ಯ, ಉಡುಪಿ ಜಿಲ್ಲಾ ಹಿಂದೂ ಮಹಾಸಭಾ ಅಧ್ಯಕ್ಷರು ಸಂತೋಷ್ ಉದ್ಯಾವರ, ರಾಘವೇಂದ್ರ ಭಕ್ತ, ಸುಧಾಕರ್ ಶೆಟ್ಟಿ, ರಾಘವೇಂದ್ರ ಪ್ರಭು ಕವಾ೯ಲು, ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ವೀಣಾ.ಎಸ್. ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಜಗದೀಶ್ ಶೆಟ್ಟಿ, ಉದಯ ನಾಯ್ಕ್, ವಿಜಯ ಕುಂದರ್, ವಾರಿಜ ಕಲ್ಮಾಡಿ, ಸತೀಶ್, ವಿಘ್ನೇಶ್, ಪ್ರದೀಪ್, ನೀಲೇಶ್, ಅಜಯ್, ಸುದರ್ಶನ್, ಸುಪ್ರೀತಾ, ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.
Additional image
14 Feb 2024, 05:10 PM
Category: Kaup
Tags: