ಕುತ್ಯಾರು : ಸೂರ್ಯ ಚೈತನ್ಯ ಹೈಸ್ಕೂಲ್ - ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆ
Thumbnail
ಕುತ್ಯಾರು : ಇತ್ತೀಚಿಗೆ ಬೆಳ್ಮಣ್ ವಿಠೋಭಾ ಭಜನಾ ಮಂದಿರದಲ್ಲಿ ನಡೆದ ಬುಡೋಕಾನ್ ಕರಾಟೆ ಆಂಡ್ ಮಾರ್ಷಲ್ ಆರ್ಟ್ಸ್ ಡೋ ಇದರ ಅಂಗವಾಗಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸೂರ್ಯ ಚೈತನ್ಯ ಶಾಲೆಯ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಕೃಷ್ಣ ಆಚಾರ್, ಕುಮಿಟೆ ವಿಭಾಗದಲ್ಲಿ ಕುಮಾರಿ ಧನ್ವಿ ಪ್ರಥಮಸ್ಥಾನ , ಧನಂಜಯ ದ್ವಿತೀಯ ಸ್ಥಾನ ಹಾಗು ಶ್ರೀ ವರ್ಧನ , ಧೃತೇಶ್ , ರನ್ವಿತ್ , ಕುಮಾರಿ ಪ್ರಾಪ್ತಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವರ್ಗದವರು ಹಾಗೂ ಕರಾಟೆ ತರಬೇತುದಾರರಾದ ಸತೀಶರವರು ಅಭಿನಂದಿಸಿದ್ದಾರೆ.
15 Feb 2024, 07:15 PM
Category: Kaup
Tags: