ಕಾಪು : ಶ್ರೀ ಬಬ್ಬರ್ಯ ದೈವಸ್ಥಾನ ಮೂಡು ಮಟ್ಟಾರು - ಜೀರ್ಣೋದ್ಧಾರದ ಹೊರೆ ಕಾಣಿಕೆಯ ಪೂರ್ವಭಾವಿ ಸಭೆ
Thumbnail
ಕಾಪು : ಶ್ರೀ ಬಬ್ಬರ್ಯ ದೈವಸ್ಥಾನ ಮೂಡು ಮಟ್ಟಾರು ಜೀರ್ಣೋದ್ಧಾರ ಸಮಿತಿಯ ವತಿಯಿಂದ ಮಟ್ಟಾರು ಬಯಲು ರಂಗಮಂದಿರದಲ್ಲಿ ಹೊರೆ ಕಾಣಿಕೆಯ ಪೂರ್ವಭಾವಿ ಸಭೆ ನಡೆಯಿತು. ಶಂಕರ್ ಶೆಟ್ಟಿ ದರ್ಮೆಟ್ಟು ದೀಪ ಬೆಳಗಿಸುವ ಮುಖಾಂತರ ಜೀರ್ಣೋದ್ದಾರದ ಹೊರೆ ಕಾಣಿಕೆಯ ಪೂರ್ವಭಾವಿ ಸಭೆಗೆ ಚಾಲನೆ ನೀಡಿದರು. ಹೊರೆ ಕಾಣಿಕೆಯ ಉಸ್ತುವಾರಿ ಸಂದೀಪ್ ಪೂಜಾರಿ ಹೊರೆಕಾಣಿಕೆಯ ರೂಪುರೇಷೆಗಳು, ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಹಲವಾರು ವಲಯದಲ್ಲಿ ಹೊರೆಕಾಣಿಕೆಯ ಕೇಂದ್ರಗಳನ್ನು ಮಾಡಿ ಆದರ ಜವಾಬ್ದಾರಿಗಳನ್ನು ನೀಡಿದರು. ಈ ಸಂದರ್ಭ ಶ್ರೀ ಬಬ್ಬರ್ಯ ಆಡಳಿತ ಸಮಿತಿಯ ಅಧ್ಯಕ್ಷರಾದ ಜಗದೀಶ್ ಶೆಟ್ಟಿ, ಉಪಾಧ್ಯಕ್ಷರಾದ ಹರೀಶ್ಚಂದ್ರ ಶೆಟ್ಟಿ, ದಿನರಾಜ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ದೇವಸ್ಥಾನಗಳ ಆಡಳಿತ ಮೊಕ್ತೇಸರರು, ಅಧ್ಯಕ್ಷರು, ಸಂಘ ಸಂಸ್ಥೆಗಳ ಅಧ್ಯಕ್ಷರು, ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು ಪ್ರಿತೇಶ್ ಶೆಟ್ಟಿ ಸ್ವಾಗತಿಸಿದರು. ಜಯಪ್ರಕಾಶ್ ಪ್ರಭು ಕಾರ್ಯಕ್ರಮ ನಿರೂಪಿಸಿದರು.
19 Feb 2024, 01:25 PM
Category: Kaup
Tags: