ಶ್ರೀ ಬ್ರಹ್ಮಲಿಂಗೇಶ್ವರ ಆಲಡೆ ಪಾಂಗಾಳ - ಮಂಡೇಡಿ : ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ
ಪಾಂಗಾಳ : ವೇದಮೂರ್ತಿ ಪಾಂಗಾಳ ವಿಷ್ಣು ಭಟ್ಟರ ನೇತೃತ್ವದಲ್ಲಿ ಪಾಂಗಾಳ-ಮಂಡೇಡಿ ಶ್ರೀ ಬ್ರಹ್ಮಲಿಂಗೇಶ್ವರ ಆಲಡೆ ಪುನರ್ ನಿರ್ಮಿತ ಶ್ರೀ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ, ಶ್ರೀ ನಾಗಬ್ರಹ್ಮ ದೇವರು, ಶ್ರೀ ವೀರಭದ್ರ ಹಾಗೂ ಪರಿವಾರ ದೈವಗಳ ವಾರ್ಷಿಕ ಜಾತ್ರಾ ಮಹೋತ್ಸವದ ಗುರುವಾರ ಸಂಪನ್ನಗೊಂಡಿತು.
ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆ ಘಂಟೆ 9ರಿಂದ ಪೂಜಾದಿ ಸಕಲ ಕಾರ್ಯಕ್ರಮಗಳು ಜರಗಿದವು.
ಈ ಸಂದರ್ಭ ಪಾಂಗಾಲಣ್ಣ ಬಂಟ ಕುಟುಂಬಸ್ಥರು, ಕ್ಷೇತ್ರದ ಸಮಿತಿಯ ಪದಾಧಿಕಾರಿಗಳು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಅರ್ಚಕ ವೃಂದ, ಭಕ್ತರು ಉಪಸ್ಥಿತರಿದ್ದರು.
