ಕಾರ್ಕಳ : ಕುಲಾಲ ಚಾವಡಿಯಿಂದ ನೆರವಿನ ಹಸ್ತ
Thumbnail
ಕಾರ್ಕಳ : ತಾಲೂಕಿನ ಅಂಡಾರು ಗ್ರಾಮದ ಮಹಿಳೆಯೋರ್ವರ ಶಸ್ತ್ರಚಿಕಿತ್ಸೆಗೆ ಕುಲಾಲ ಚಾವಡಿಯಿಂದ ರೂ.35,000 ಸಂಗ್ರಹಿಸಿ ಫೆಬ್ರವರಿ 18 ರಂದು ಹಸ್ತಾಂತರಿಸಲಾಯಿತು. ಅಂಡಾರುವಿನ ಶಾಲಿನಿಯವರು ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವಿಗಾಗಿ ನೀಡಿದ ಮನವಿಯ ಮಾಹಿತಿ ತಿಳಿದ ಕೃಷ್ಣ ಕುಲಾಲ್ ಅಜೆಕಾರ್ ಇವರು ಕುಲಾಲ ಚಾವಡಿಯ ಸಹೃದಯರ ಗಮನಕ್ಕೆ ತಂದು ದೇಶ ವಿದೇಶದ ಚಾವಡಿ ಸದಸ್ಯರು ಧನ ಸಹಾಯ ನೀಡಿದ್ದಾರೆ. ಈ ಸಂಧರ್ಭದಲ್ಲಿ‌ ಕುಲಾಲ ಚಾವಡಿ ನಿರ್ವಾಹಕ ಸಂತೋಷ್ ಕುಲಾಲ್ ಪದವು, ಹೃದಯ್ ಕುಲಾಲ್ ಹೀರ್ಗಾನ , ವಿಶ್ವನಾಥ್ ಕುಲಾಲ್, ಕೃಷ್ಣ ಕುಲಾಲ್ ಅಜೆಕಾರು, ಜಯಾನಂದ ಕುಲಾಲ್ ಅಂಡಾರು, ಸುರೇಂದ್ರ ಕುಲಾಲ್ ಅಂಡಾರು ಉಪಸ್ಥಿತರಿದ್ದರು.
25 Feb 2024, 10:17 AM
Category: Kaup
Tags: