ಮಂಗಳೂರು : ಎನ್ ಎಸ್ ಸಿ ಡಿ‌ ಎಫ್ -12 ಗಂಟೆಗಳ ಕನ್ನಡ ಗೀತೆಗಳ ಗಾಯನ ವಿಶ್ವ ದಾಖಲೆ ; ಅಭಿನಂದನಾ ಸಮಾರಂಭ
Thumbnail
ಮಂಗಳೂರು : ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ದಿ ಪ್ರತಿಷ್ಠಾನ (NSCDF) ನವೆಂಬರ್ 5ರಂದು ಆಯೋಜಿಸಿದ್ದ ನಿರಂತರ 12 ಗಂಟೆಗಳ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮವು ವಿಶ್ವ ದಾಖಲೆಯನ್ನು ನಿರ್ಮಿಸಿದ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭವು ಫೆಬ್ರವರಿ 23ರಂದು ಮಂಗಳೂರು ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ತುಳು ಚಲನಚಿತ್ರ ಖ್ಯಾತ ಹಾಸ್ಯ ನಟ ಅರವಿಂದ ಬೋಳಾರ್ ಮಾತನಾಡಿ ಮನಃಶಾಂತಿಗಾಗಿ ಹಾಡು ವಿಶ್ವದಾಖಲೆ ನಿರ್ಮಿಸಿದ್ದು ಸಂತಸದ ವಿಚಾರ. ಇವರ ಈ ಸಾಧನೆಯನ್ನು ಮೆಚ್ಚಲೇಬೇಕು. ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರಬೇಕು ಮತ್ತು ಇವರ ತಂಡಕ್ಕೆ ಎಲ್ಲರೂ ಸಹಕರಿಸಬೇಕು ಎಂದರು. ವಿಶ್ವ ದಾಖಲೆ ನಿರ್ಮಿಸಿದ ಗಾಯಕರಾದ ಗಂಗಾಧರ್ ಗಾಂಧಿ, ವರ್ಷ ಕರ್ಕೇರ, ಶ್ರೀರಕ್ಷಾ ಸರ್ಪಂಗಳ, ನೇತ್ರ ಖುಷಿ, ರಾಣಿ ಪುಷ್ಪಲತಾ ದೇವಿ ಇವರಿಗೆ ವಿಶ್ವದಾಖಲೆಯ ಪ್ರಮಾಣ ಪತ್ರ ನೀಡಿ ಶಾಲು, ಹಾರ, ತುರಾಯಿ, ಫಲತಾಂಬೂಲದೊಂದಿಗೆ ಸನ್ಮಾನಿಸಲಾಯಿತು. ಅಂದಿನ ಕಾರ್ಯಕ್ರಮದಲ್ಲಿ ಸಹಕರಿಸಿದ ರವೀಂದ್ರ ಮುನ್ನಿಪಾಡಿ, ಡಾ. ಸುರೇಶ್ ನೆಗಳಗುಳಿ, ಡಾ. ವಾಣಿಶ್ರೀ ಕಾಸರಗೋಡು, ಯು ಆರ್ ಶೆಟ್ಟಿ, ಶಿವಪ್ರಸಾದ್ ಕೊಕ್ಕಡ, ರೇಷ್ಮಾ ಶೆಟ್ಟಿ ಗೋರೂರು, ಆರ್ವಿ ವಿ.ಕೆ, ಗುರುರಾಜ್ ಎಂ.ಆರ್, ರೇಖಾ ಸುದೇಶ್ ರಾವ್, ಮಮ್ತಾ ರಾವ್ ಮುಂತಾದವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು NSCDF ಅಧ್ಯಕ್ಷ ಗಂಗಾಧರ ಗಾಂಧಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತುಳು ಹಾಸ್ಯ ಚಿತ್ರನಟ ಸತೀಶ್ ಬಂದಲೆ, KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, NSCDF ಅಂತರಾಷ್ಟ್ರೀಯ ವಕ್ತಾರೆ ಮಮತಾ ರಾವ್, ಪ್ರಧಾನ ಕಾರ್ಯದರ್ಶಿ ದಿನಕರ ಡಿ. ಬಂಗೇರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಶ್ಮಿ ಸನಿಲ್ ಮತ್ತು ರೇಷ್ಮಾ ಶೆಟ್ಟಿ ಗೋರೂರು ನಿರೂಪಿಸಿದರು.
Additional image Additional image Additional image
25 Feb 2024, 11:05 AM
Category: Kaup
Tags: